ಕಾಂಗ್ರೆಸ್-ಎನ್ಸಿಪಿ ಮತ್ತೆ ಮೈತ್ರಿ

0
18

ಮುಂಬೈ: ಕೇಂದ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗ ವಿಶಾಲ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಶತಪ್ರಯತ್ನಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರದಲ್ಲಿ ಶರತ್ ಪವಾರ್ ನೇತೃತ್ವದ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಪರಸ್ಪರ  ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ತೀರ್ಮಾನಿಸಿದೆ. ಇದರಂತೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವ ತೀರ್ಮಾನಕ್ಕೆ ಕಾಂಗ್ರೆಸ್ ಮತ್ತು ಎನ್.ಸಿ.ಪಿ ಬಂದಿದೆ. ಈ ಹಿಂದೆ ಎನ್.ಸಿ.ಪಿ ೨೦೧೪ರಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಕಡಿದು ಹಾಕಿತ್ತು. ನಂತರ  ತನ್ನ ಸ್ವಂತ ಬಲದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸತೊಡ ಗಿತ್ತು. ಅದರಿಂದಾಗಿ ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ ಮಾತ್ರವಲ್ಲ, ಕಾಂಗ್ರೆಸ್‌ನ ಬಲವೂ ಕುಂದತೊಡಗಿ ಬಿಜೆಪಿ ಶಿವಸೇನೆ ಮೈತ್ರಿಕೂಟ ಶಕ್ತಿಯಾಗಿ ವಿಜೃಂಭಿಸತೊಡ ಗಿತ್ತು. ಪರಸ್ಪರ ಮೈತ್ರಿ ಕಡಿದುಕೊಂಡಿರು ವುದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್.ಸಿ.ಪಿಗೆ ಮಾರಕ ಪ್ರಹಾರವಾಗಿ ಪರಿಣಮಿಸಿದೆ ಎಂದು ಉಭಯ ಪಕ್ಷಗಳು ಈಗ ಮನಗಂಡಿದ್ದು, ಅದರಿಂದಾಗಿ ಬಿಜೆಪಿಯನ್ನು ಎದುರಿಸಿ ಆ ಮೂಲಕ ಮಹಾರಾಷ್ಟ್ರ ದಲ್ಲಿ ತಮ್ಮ ಹಳೇ ಪ್ರತಾಪವನ್ನು ಮತ್ತೆ ಮೈಗೂಡಿಸಿಕೊಳ್ಳುವ ಯತ್ನವೆಂಬಂತೆ ಮೈತ್ರಿಮಾಡಿಕೊಳ್ಳುವ ಹೊಸ ತೀರ್ಮಾನಕ್ಕೆ ಬಂದಿದೆ.

ಇದೇ ವೇಳೆ ಕಾಂಗ್ರೆಸ್-ಎನ್.ಸಿ.ಪಿ ನಡುವಿನ ಈ ಮೈತ್ರಿ ಕೇಂದ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ರೂಪೀಕರಿಸಲಾಗುವ ವಿಶಾಲಮೈತ್ರಿಗೆ ಇನ್ನಷ್ಟು ಬಲ ನೀಡಲಿದೆ ಎಂದು ಕಾಂಗ್ರೆಸ್ ನೇತೃತ್ವ ತಿಳಿಸಿದೆ. ಆದರೆ ಇದೇ ಸಂದರ್ಭದಲ್ಲಿ ಕೇರಳದಲ್ಲಿ ಎನ್.ಸಿ.ಪಿ ಎಡರಂಗದ ಘಟಕ ಪಕ್ಷ ವಾಗಿಯೇ ಮುಂದುವರಿಯಲಿದೆ ಎಂದು ಶರತ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ತನ್ನ ಹಳೆ ಮಿತ್ರಕ್ಷವಾದ ಬಿಜೆಪಿಯೊಂದಿಗಿನ ದೀರ್ಘ ವರ್ಷದ ಮೈತ್ರಿಯನ್ನು ಶಿವಸೇನೆ ಈಗಾಗಲೇ ಮುರಿದುಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಏಕಾಂಗಿಯೂ ಸ್ಪರ್ಧಿಸುವ ತೀರ್ಮಾನ  ಶಿವಸೇನೆ ಕೈಗೊಂಡಿದೆ. ಆದರೆ ಶಿವಸೇನೆಯ ಇಂತಹ ತೀರ್ಮಾನ ಚುನಾವಣೆಯ ಲ್ಲಿ ತಮ್ಮ ಗೆಲುವಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆಂದೂ ಬಿಜೆಪಿ ಹೇಳುತ್ತಿದೆ. ಇದೇ ವೇಳೆ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಮತ್ತೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಅದು ಕಾಂಗ್ರೆಸ್ ವಲಯದಲ್ಲಿ ಸಂತಸ ಸೃಷ್ಟಿಸಿದೆ.

NO COMMENTS

LEAVE A REPLY