ಆಟೋ ಟ್ಯಾಕ್ಸಿ ಢಿಕ್ಕಿ: ಪತ್ರಿಕಾ ಏಜೆಂಟ್ ಹೊಳೆಗೆ ಬಿದ್ದು ಗಾಯ

0
19

ಎಡನೀರು: ಆಟೋ ಟ್ಯಾಕ್ಸಿ ಢಿಕ್ಕಿ ಹೊಡೆದು ಪಾದಚಾರಿ, ಕಾರವಲ್ ಏಜೆಂಟ್ ಹೊಳೆಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಮೊನ್ನೆ ರಾತ್ರಿ ಎಡನೀರು ಸೇತುವೆಯಲ್ಲಿ ಆಟೋ ಟ್ಯಾಕ್ಸಿ ಢಿಕ್ಕಿ ಹೊಡೆದಿದ್ದು, ಎಡನೀರು ನಿವಾಸಿ ಕಾರವಲ್ ಏಜೆಂಟ್ ಹುಸೈನ್ (೪೭) ಗಾಯಗೊಂಡವರು. ಇವರು ಅಂಗಡಿ ಮುಚ್ಚಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಆಟೋ ಟ್ಯಾಕ್ಸಿ ಢಿಕ್ಕಿ ಹೊಡೆದಿದ್ದು, ಈವೇಳೆ ಆಯತಪ್ಪಿ ಹೊಳೆಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖ ಲಿಸಿದ್ದು, ಇದೀಗ ಚಿಕಿತ್ಸೆಯಲ್ಲಿದ್ದಾರೆ.

NO COMMENTS

LEAVE A REPLY