ರಾಜ್ಯದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಬಿಸಿಲ ಝಳಕ್ಕೆ ಇಬ್ಬರಿಗೆ ಸುಟ್ಟಗಾಯ

0
19

ಕಾಸರಗೋಡು: ರಾಜ್ಯದಲ್ಲಿ ಸೆಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲ ತಾಪಕ್ಕೆ ತೃಶೂರಿನಲ್ಲಿ ಸುಟ್ಟು ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ತೃಶೂರು ದೇಶಮಂಗಲ ನಿವಾಸಿಗಳಾದ ಸುಭಾಷ್ ಮತ್ತು ಸೈದಲಿ ಆಸ್ಪತ್ರೆಯಲ್ಲಿ ದಾಖಲಾದವ ರಾಗಿದ್ದಾರೆ. ಇವರು ನಿನ್ನೆ ತೃಶೂರಿನ ಭಾರತ ಹೊಳೆ ಬಳಿ ಸ್ನಾನಕ್ಕೆಂದು ನೀರಿಗಿಳಿಯುವ ವೇಳೆ ತೀವ್ರ ಬಿಸಿಲ ಝಳದಿಂದ ಗಾಯಗೊಂಡಿದ್ದರು. ತೃಶೂರಿನಲ್ಲಿ ಉಷ್ಣಾಂಶ  ೩೭.೭ ಡಿಗ್ರಿಗೇರಿದೆ. ರಾಜ್ಯದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,  ಜನರು ಹೊರಗಡೆ ಹೆಚ್ಚು ಸಮಯ ದುಡಿಯಬಾರದು. ಮಾತ್ರವಲ್ಲ ಬಿಸಿಲಲ್ಲಿ ನಡೆದುಕೊಂಡು ಹೋಗು ವುದನ್ನು ನಿಯಂತ್ರಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.  ಪಾಲ್ಘಾಟ್ ಜಿಲ್ಲೆಯಲ್ಲಿ ಉಷ್ಣಾಂಶ  ೪೦ ಡಿಗ್ರಿ ತನಕ  ಏರ ತೊಡಗಿದೆ. ಉಳಿದ ಜಿಲ್ಲೆಗಳಲ್ಲಿ ೩೮ ಡಿಗ್ರಿ ಆಗಿದೆ.

ಬಿಸಿಲ ತಾಪ  ಹೆಚ್ಚಾಗುತ್ತಿರುವು ದರಿಂದ   ಭೂಮಿಯ  ಬಾಷ್ಪೀಕರಣ ಪ್ರಕ್ರಿಯೆ ಇನ್ನಷ್ಟು ತೀವ್ರಗೊಂಡಿದ್ದು, ಹೀಗೆ ಮುಂದುವರಿದಲ್ಲಿ ರಾಜ್ಯದಲ್ಲಿ ಬಾವಿ, ಕೆರೆ, ಹೊಳೆ ಇತ್ಯಾದಿಗಳಲ್ಲಿ ನೀರಿನ ಮಟ್ಟ ಕುಸಿದು ಮುಂದೆ ನೀರಿನ ಕೊರತೆಗೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನು ಎದುರಿಸಲು ಸರಕಾರ ಈಗಾಗಲೇ ಅಗತ್ಯದ ಮುಂಜಾಗ್ರತಾ ಕ್ರಮಕೈಗೊಂ ಡಿದೆ. ಮಾತ್ರವಲ್ಲ, ಅಗತ್ಯದ  ಸಹಾಯ ಒದಗಿಸಿ  ಉಪಜಿಲ್ಲಾಧಿಕಾರಿಗಳ ಹೊಣೆಯಲ್ಲಿ ದುರಂತ ಪರಿಹಾರ ವಿಭಾಗ ಸಿದ್ಧಪಡಿಸಲಾಗಿದೆ. ಈ ಮಧ್ಯೆ ಬೇಸಿಗೆ ಮಳೆ ಸುರಿದಲ್ಲಿ ಸ್ಥಿತಿ ಅಲ್ಪ ಸುಧಾರಿಸಬಹುದೆಂದೂ ಹವಾಮಾನ ಇಲಾಖೆ ತಿಳಿಸಿದೆ.

NO COMMENTS

LEAVE A REPLY