ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಆರಂಭ ವಿಳಂಬ ಜೋಡೆತ್ತಿನಿಂದ ಉತ್ತು ಕೃಷಿ ಚಳವಳಿಗೆ ಬಿಜೆಪಿ ಚಾಲನೆ

0
114

ಪೆರ್ಲ: ಬಹುನಿರೀಕ್ಷಿತ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಉಕ್ಕಿನಡ್ಕದಲ್ಲಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ಶಿಲಾನ್ಯಾ ಸಗೈದು ವರ್ಷ ಎರಡು ಸಂದರೂ ಈ ತನಕ ಕಾಮಗಾರಿ ಆರಂಭಿಸದೆ ಇರುವುದನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಕೃಷಿ ಚಳವಳಿ ನಡೆಸಲಾಯಿತು.

ಉದ್ದೇಶಿತ ಆಸ್ಪತ್ರೆ ಜಾಗದಲ್ಲಿ ಮಣ್ಣು ತುಂಬಿಸಿ ಜೋಡೆತ್ತುಗಳನ್ನು ಕಟ್ಟಿ ಉಳುವ ಮೂಲಕ ಚಳವಳಿಗೆ ಚಾಲನೆ ನೀಡಲಾಯಿತು. ಇಂದು ಬೆಳಿಗ್ಗೆ ೧೧ ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ನೇಗಿಲು ಹಿಡಿದು ಉತ್ತು ಚಳವಳಿಯನ್ನು ಉದ್ಘಾಟಿಸಿದರು. ಬಳಿಕ ಈ ಸ್ಥಳದಲ್ಲಿ ವಿವಿಧ ತರಕಾರಿ, ಹರಿವೆ ಗಿಡಗಳನ್ನು ನೆಡಲಾಯಿತು. ಅಲ್ಲದೆ ಬೀಜಗಳ ಬಿತ್ತನೆಯನ್ನು ಮಾಡಲಾಯಿತು. ಇಂದು ವಿಶ್ವ ಮಣ್ಣು ದಿನವೂ ಆಗಿದ್ದು, ಈ ಸಂದರ್ಭದಲ್ಲೇ ಮಣ್ಣಿನಲ್ಲಿ ಬೀಜ ಬಿತ್ತನೆ ಮಾಡುವ ಮೂಲಕ ಚಳವಳಿಗೆ ನಾಂದಿ ಹಾಡಲಾಗಿದೆ. ನೆಟ್ಟ ಗಿಡಗಳನ್ನು ಬೇಲಿ ಹಾಕಿ ಸಂರಕ್ಷಿಸಿ, ನೀರು, ಗೊಬ್ಬರ ನೀಡಿ ಪೋಷಿಸಲಾ ಗುವುದು. ಇವುಗಳ ಫಲಗಳನ್ನು ಬಡವರಿಗೆ ದಾನ ಮಾಡಲಾಗುವುದು ಎಂದು ಸುರೇಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.  ವಿಶೇಷ ರೀತಿಯ ಚಳವಳಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಕ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಶೈಲಜಾ ಭಟ್, ಎಸ್.ಸಿ, ಎಸ್.ಟಿ ಮೋರ್ಛಾ ಜಿಲ್ಲಾಧ್ಯಕ್ಷ ರಾಮಪ್ಪ ಮಂಜೇಶ್ವರ, ಯುವಮೋರ್ಛಾ ಜಿಲ್ಲಾಧ್ಯಕ್ಷ ಸುನಿಲ್ ಪಿ.ಆರ್, ಎಣ್ಮಕಜೆ ಪಂಚಾಯತ್ ಅಧ್ಯಕ್ಷ ರೂಪಾವಾಣಿ ಆರ್. ಭಟ್, ಪಕ್ಷದ ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಕಾರ್ಯದರ್ಶಿ ಹರೀಶ್ ನಾರಂಪಾಡಿ, ಕ್ಯಾಂಪ್ಕೋ ನಿರ್ದೇಶಕ ಶಿವಕೃಷ್ಣ ಭಟ್ ಮುಳ್ಳೇರಿಯ, ಮುಗು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್. ನಾರಾಯಣ, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಎ. ಕೆ ಕಯ್ಯಾರ್, ಜಿ. ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ, ಪಂ. ಸದಸ್ಯ ಡಿ. ಶಂಕರ, ಟಿ. ಪ್ರಸಾದ್ ಮೊದಲಾದವರು ನೇತೃತ್ವ ನೀಡಿದ್ದಾರೆ. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿ. ಪಂ. ಸದಸ್ಯ ಶ್ರೀಕಾಂತ್ ಸ್ವಾಗತಿಸಿದರು.

NO COMMENTS

LEAVE A REPLY