೨೦ ಕಿಲೋ ನಿಷೇಧಿತ ತಂಬಾಕು ಉತ್ಪನ್ನ ವಶ

0
34

ಕಾಸರಗೋಡು: ಅಂಗಡಿಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಕೇರಳದಲ್ಲಿ ನಿಷೇಧ ಹೇರಲ್ಪಟ್ಟ ೨೦ ಕಿಲೋ  ಪಾನ್ ಮಸಾಲೆ ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಅಬಕಾರಿಸರ್ಕಲ್ ಕಚೇರಿಯ ಇನ್‌ಸ್ಪೆಕ್ಟರ್ ಎ. ಸತ್ಯನ್ ನೇತೃತ್ವ ತಂಡ  ವಶಪಡಿಸಿಕೊಂಡಿದೆ.

ಈ ಸಂಬಂಧ ಮುಂಡಿತ್ತಡ್ಕ ಕೋಟ ಹೌಸ್‌ನ ಮೊಹಮ್ಮದ್ ಎ.ಕೆ.(೫೦) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂಡಿತ್ತಡ್ಕ ಪಳ್ಳದಲ್ಲಿರುವ ಇವರ  ಅಂಗಡಿ ಮತ್ತು ಅದರ ಗೋದಾಮಿನೊಳಗೆ ಪಾನ್‌ಮಸಾಲೆ ಉತ್ಪನ್ನಗಳನ್ನು ಅಕ್ರಮವಾಗಿ ಬಚ್ಚಿಡಲಾಗಿತ್ತೆಂದು ಅಬಕಾರಿ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ಹ್ಯಾನ್ಸ್, ಮಧು ಇತ್ಯಾದಿ ತಂಬಾಕು ಉತ್ಪನ್ನಗಳು ಒಳಗೊಂಡಿದೆ.

NO COMMENTS

LEAVE A REPLY