ಡಿವೈಎಫ್ಐ ನೇತಾರನಿಗೆ ಮನೆಗೆ ನುಗ್ಗಿ ಆಕ್ರಮಣ: ನಾಲ್ವರು ಆರೋಪಿಗಳ ಬಂಧನ

0
27

ಕುಂಬಳೆ: ಕನ್ನಟಿಪಾರೆ ನಿವಾಸಿಯೂ, ಡಿವೈಎಫ್‌ಐ ಕನ್ನಟಿಪಾರೆ ಯೂನಿಟ್ ಅಧ್ಯಕ್ಷ ನೌಶಾದ್(೨೮)ರಿಗೆ ಮನೆಗೆ ನುಗ್ಗಿ ಆಕ್ರಮಣಗೈದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರು ಕೆ.ಕೆ. ನಗರದ ಕಂಡಚ್ಚಾಲ್ ಕಟ್ಟೆ ಹೌಸ್‌ನ ಮೊಹಮ್ಮದ್ ಯೂನುಸ್(೨೦), ಕಯ್ಯಾರು ಕೆ.ಕೆ. ನಗರ ಬೈತುಲ್ ಅಮೀನ್ ಹೌಸ್‌ನ ಮೊಹಮ್ಮದ್ ಶಮ್ಮಾಸ್(೨೨), ಕುಬಣೂರು ಕೆದಕ್ಕಾರ್ ಬಳಪ್ ಹೌಸ್‌ನ ಬಿ.ಎಂ. ಮೊಹಮ್ಮದ್(೨೧), ಕಯ್ಯಾರ್ ಕನ್ನಟಿಪಾರೆ ಶಿಫಾಮಂಜಿಲ್‌ನ ಮೊಹಮ್ಮದ್ ಅಶ್ರಫ್(೧೯) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಆಕ್ರಮಣ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದು ಈ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜನವರಿ ೨೬ರಂದು ರಾತ್ರಿ ನೌಶಾದ್‌ರ ಮನೆಗೆ ನುಗ್ಗಿದ ಆರು ಮಂದಿ ತಂಡ ನೌಶಾ ದ್‌ರಿಗೆ ಆಕ್ರಮಣ ನಡೆಸಿ ಗಾಯಗೊಳಿ ಸಿತ್ತು. ಅಲ್ಲದೆ ಟಿವಿಯನ್ನು ಹೊಡೆದು ನಾಶಗೊಳಿಸಲಾಗಿತ್ತು. ಬಳಿಕ ಇದೇ ತಂಡ ನೌಶಾದ್‌ರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದು, ಅಪಘಾತದಲ್ಲಿ ಗಾಯಗೊಂಡಿರುವುದಾಗಿ ತಿಳಿಸಿ ದಾಖ ಲಿಸಿದ ಬಳಿಕ ಪರಾರಿಯಾಗಿತ್ತು. ಬಳಿಕ ಕುಂಬಳೆ ಪೊಲೀಸ್ ಹಾಗೂ ನಾಗರಿಕರು ಸೇರಿ ನೌಶಾದ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಇದೀಗ ಸೆರೆಗೀಡಾದ ನಾಲ್ವರ ಸಹಿತ ಆರು ಮಂದಿ ವಿರುದ್ಧ ಮನೆಗೆ ನುಗ್ಗಿ ಆಕ್ರಮಣ, ಹತ್ಯೆಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದರು.  ಇದೇ ವೇಳೆ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್‌ಗೆ ಆ ಅರ್ಜಿ ಸಲ್ಲಿಸಿದ್ದು,  ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ತಲೆಮರೆಸಿಕೊಂಡ ಆರೋಪಿಗಳನ್ನು ಕುಂಬಳೆಗೆ ತಲುಪಿದ್ದರು. ಆ ಬಗ್ಗೆ ತಿಳಿದ ಇನ್‌ಸ್ಪೆಕ್ಟರ್ ಕೆ. ಪ್ರೇಮ್‌ಸದನ್, ಅಡಿಶನಲ್ ಎಸ್.ಐ. ಪಿ.ವಿ. ಶಿವದಾಸನ್ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪೇಟೆಯಿಂದ ಬಂಧಿಸಿದ್ದಾರೆ.

NO COMMENTS

LEAVE A REPLY