ಸುಹರಾ ನಿಗೂಢ ಸಾವು: ಟಿಪ್ಪರ್ ಲಾರಿ ಸಹಿತ ಚಾಲಕ ಪೊಲೀಸ್ ಕಸ್ಟಡಿಗೆ

0
24

ಬದಿಯಡ್ಕ: ನೆಲ್ಲಿಕಟ್ಟೆಯ  ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮೂಲತಃ ಚೆರ್ಲಡ್ಕ ನಿವಾಸಿ ಸುಹರಾ(೪೬)ರ ನಿಗೂಢ ಸಾವಿಗೆ ಸಂಬಂಧಿಸಿ ಎಡನೀರಿನ ಟಿಪ್ಪರ್ ಲಾರಿ ಯೊಂದರ ಚಾಲಕನನ್ನು ವಿದ್ಯಾನಗರ ಸಿ.ಐ. ಬಾಬು ಪೆರಿಂಙೋತ್ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಟಿಪ್ಪರ್ ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.   ಕಳೆದ ಸೋಮವಾರದಂದು ಮುಂಜಾನೆ ೫.೩೦ಕ್ಕೆ ವಿಟ್ಲದಿಂದ ಜಲ್ಲಿ ಹುಡಿ ತರಲೆಂದು ಹೋಗುತ್ತಿದ್ದ ಟಿಪ್ಪರ್ ಲಾರಿ ಸುಹರಾರಿಗೆ ಢಿಕ್ಕಿ ಹೊಡೆದಿರಬಹುದೆಂಬ ಶಂಕೆ ಉಂಟಾಗಿದೆ. ಲಾರಿ ನಿಲ್ಲಿಸದೆ ಸಾಗಿದೆಯೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಢಿಕ್ಕಿ ಹೊಡೆದ ಲಾರಿಯ ಲೈಟಿನ ತುಂಡೊಂದು ಅಲ್ಲೇ ಪಕ್ಕದಿಂದ ಲಭಿಸಿದೆ. ಅದರ  ಜಾಡು ಹಿಡಿದು ಪೊಲೀಸರು ನಡೆಸಿದ ಶೋಧದಲ್ಲಿ ಢಿಕ್ಕಿ ಹೊಡೆದಿರುವುದಾಗಿ ಶಂಕಿಸಲಾಗುತ್ತಿರುವ ಟಿಪ್ಪರ್ ಲಾರಿಯನ್ನು ಸಿಐ ಪತ್ತೆಹಚ್ಚಿ ಅದರ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸತೊಡಗಿದ್ದಾರೆ.

ಇದೇ ವೇಳೆ ಸುಹರಾಳ ನಿಗೂಢ ಸಾವಿಗೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡ ಆಕೆಯ ಸಹೋದರ ಇಬ್ರಾಹಿಂನನ್ನು ಪೊಲೀಸರು ವಿಚಾರಿಸಿ ಬಿಡುಗಡೆಗೊಳಿಸಿದ್ದಾರೆ. ಆತನನ್ನು ವಿಚಾರಿಸಿದಾಗ ಪದೇ ಪದೇ ಭಿನ್ನಮತೀಯ ಹೇಳಿಕೆ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆಗ್ರಹಪಟ್ಟಲ್ಲಿ ಪೊಲೀಸ್ ಠಾಣೆಗೆ ಬರಬೇಕೆಂಬ ನಿಬಂಧನೆಯಡಿ ಆತನನ್ನು ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎದೆ ಎಲುಬು ಮುರಿತಕ್ಕೊಳಗಾಗಿ ಆಂತರಿಕ ರಕ್ತಸ್ರಾವ ಉಂಟಾಗಿರುವುದೇ ಸುಹರಾರ ಸಾವಿಗೆ ಕಾರಣವಾಗಿದೆ ಎಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ ಎಂದೂ ಅದರ ವರದಿ ಕೈಸೇರಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿದುಕೊಳ್ಳಲು ಸಾಧ್ಯವೆಂದೂ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಸರ್ಜನ್ ಗೋಪಾಲಕೃಷ್ಣ ಪಿಳ್ಳೆಯವರು ಸುಹರಾರ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಕಂಡು ಸಾವಿನ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY