ಪೈವಳಿಕೆಯಲ್ಲಿ ಕಾ. ಮಾ.ಲೀ. ಮೈತ್ರಿ: ಕಾರ್ಯಕರ್ತರಲ್ಲಿ ವ್ಯಾಪಕ ಅಸಮಾಧಾನ

0
105

ಕಾಸರಗೋಡು: ಎಣ್ಮಕಜೆ, ಮೀಂಜ, ಬದಿಯಡ್ಕ ಗ್ರಾಮ ಪಂಚಾಯತ್  ಸ್ಥಾಯೀ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗನ್ನು ಬೆಂಬಲಿಸಿದ್ದ ಸಿಪಿಎಂ ಸದಸ್ಯರ ಬಗ್ಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಇದೀಗ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್‌ನ ಬೆಂಬಲ ಪಡೆದು ಪೈವಳಿಕೆ ಪಂಚಾಯತಿನ  ಅಧಿಕಾರಕ್ಕೇರಿದ ಸಿಪಿಎಂ ನಾಯಕರ ವಿರುದ್ಧ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ಪ್ರಕಟಗೊಂಡಿದೆ. ಕಾಂಗ್ರೆಸ್, ಲೀಗ್‌ನಲ್ಲೂ ಕಾರ್ಯಕರ್ತರಿಂದ ವಿರೋಧ ಕಂಡುಬಂದಿದೆ.

ನಿನ್ನೆ ನಡೆದ ಪೈವಳಿಕೆ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಎಡರಂಗ ಅಭ್ಯರ್ಥಿಗಳು ಐಕ್ಯರಂಗದ ಬೆಂಬಲದಿಂದ ಪಡೆದಿದ್ದು ಸಿಪಿಎಂನ ಭಾರತಿ ಜೆ. ಶೆಟ್ಟಿ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿಪಿಐಯ ಸುನೀತಾ ವಾಲ್ಟಿ ಡಿ’ ಸೋಜಾ ಅವರು ಉಪಾಧ್ಯಕ್ಷ  ಸ್ಥಾನಕ್ಕೆ ಆಯ್ಕೆಯಾದರು. ೭ ಸದಸ್ಯರನ್ನು ಹೊಂದಿದ ಎಡರಂಗವು ಇಬ್ಬರು ಮುಸ್ಲಿಂ ಲೀಗ್ ಹಾಗೂ ಓರ್ವ ಕಾಂಗ್ರೆಸ್ ಹಾಗೂ ಇನ್ನೋರ್ವ ಕಾಂಗ್ರೆಸ್  ಬೆಂಬಲಿತ ಸ್ವತಂತ್ರ ಸದಸ್ಯರಬೆಂಬಲದೊಂದಿಗೆ ತಲಾ ೧೧ ಮತಗಳು ಲಭಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ಎಡರಂಗ  ಸ್ಥಳೀಯ ನಾಯಕರು ಐಕ್ಯರಂಗದೊಂದಿಗೆ ಮತದಾನಕ್ಕೆ ಮುನ್ನವೇ ಒಳ ಒಪ್ಪಂದ ಮಾಡಿದ್ದರು. ಇದರನ್ವಯ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ರಾಜ್ಯದಲ್ಲಿ ಪ್ರಬಲ ಎರಡು ವಿರೋಧಿ ಒಕ್ಕೂಟಗಳಾದ ಎಡರಂಗ ಹಾಗೂ ಐಕ್ಯರಂಗ ಪೈವಳಿಕೆ ಪಂಚಾ ಯತ್‌ನಲ್ಲಿ ಒಪ್ಪಂದ ಮಾಡಿ ಕೊಂಡು ದುದು ವಿರೋದಾಭಾಸವಾಗಿ ಕಂಡುಬಂದಿ ದೆಯೆಂದು  ನಾಗರಿಕರು ಹೇಳುತ್ತಿದ್ದಾರೆ.

ಒಟ್ಟು ೧೯ ಮಂದಿ ಸದಸ್ಯರ ಬಲವಿರುವ ಪಂಚಾಯತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮಿ ಭಟ್  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹರೀಶ್ ಬೊಟ್ಟಾರಿ ಅವರಿಗೆ  ತಲಾ ೮ ಮತಗಳು ಲಭಿಸಿದ್ದುವು.

ನ. ೩೦ರಂದು ನಡೆದ  ಸ್ಥಾಯೀ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿ ಏಕೈಕ ಸಿಪಿಎಂ ಸದಸ್ಯ ಮುಸ್ಲಿಂ ಲೀಗ್  ಸದಸ್ಯನಿಗೆ,   ಎಣ್ಮಕಜೆಯಲ್ಲಿ ಇಬ್ಬರು ಸಿಪಿಎಂ ಹಾಗೂ ಓರ್ವೆ ಸಿಪಿಐ ಸದಸ್ಯೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಅಭ್ಯರ್ಥಿಗಳಿಗೆ ಅಲ್ಲದೆ ಮೀಂಜ ಪಂಚಾಯತಿನಲ್ಲಿ ಲೀಗ್‌ನ ಅಬ್ಯರ್ಥಿಗೆ ಸಿಪಿಎಂನ ಇಬ್ಬರುಹಾಗೂ ಸಿಪಿಐಯ ಓರ್ವ ಮತ ಹಾಕಿದ್ದರು. ಆದರೆ ದ. ೩ರಂದು ನಡೆದ ಸ್ಥಾಯೀ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಎಡರಂಗ ಜಿಲ್ಲಾ ಸಮಿತಿಯ ಆದೇಶದನ್ವಯ ಐಕ್ಯರಂಗ ಅಭ್ಯರ್ಥಿಗಳಿಗೆ ಮತ ಹಾಕಲಿಲ್ಲ.  ಜಿಲ್ಲೆಯ ಪಂಚಾಯತುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ. ೧೯ರಂದು ನಡೆದ ಚುನಾವಣೆಯಲ್ಲಿ ಎಡರಂಗ  ಹಾಗೂ ಐಕ್ಯರಂಗ ಎಲ್ಲೂ ಅಡ್ಡ ಮತಗಳನ್ನು ಹಾಕಿಲ್ಲ. ಇದೀಗ ಪೈವಳಿಕೆಯಲ್ಲಿ ಒಂದಾದುದು ಇಡೀ ರಾಜ್ಯದಲ್ಲೇ ಚರ್ಚಾ ವಿಷಯ ವಾಗಿದೆ.

NO COMMENTS

LEAVE A REPLY