ವಾಹನ ಅಪಘಾತ :ಗಾಯಗೊಂಡ ವಿದ್ಯಾರ್ಥಿಗೆ ೩೧.೨೫ ಲಕ್ಷ ರೂ. ನಷ್ಟ ಪರಿಹಾರ

0
26

ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯ ಗೊಂಡ ವಿದ್ಯಾರ್ಥಿಗೆ ೩೧,೨೫,೭೦೦ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಎಂಎಸಿಟಿ ನ್ಯಾಯಾಲಯ ತೀರ್ಪು ನೀಡಿದೆ.

ಈ ತೀರ್ಪಿನಂತೆ, ೨೦೧೫ ಜೂನ್ ೩ರಂದು ಪುಲ್ಲೂರು ಸೇತುವೆ ಬಳಿ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು, ಸಂಭವಿಸಿದ ಅಪಘಾತದಲ್ಲಿ ಆ ಬೈಕ್‌ನ ಹಿಂದುಗಡೆ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಹೊಸದುರ್ಗ ಹರಿಪುರಂ ವೇಲೇಶ್ವರ ಎಡಪಣಿ ಹೌಸ್‌ನ ಕೃಷ್ಣನ್ ಎಂಬವರ ಪುತ್ರ ವಿದ್ಯಾರ್ಥಿ ಶರತ್ ಎ. (೧೭)ನಿಗೆ ಯುನೈಟೆಡ್ ಇಂ ಡಿಯಾ ಇನ್ಶೂರೆನ್ಸ್   ಕಂಪೆನಿಯ ಕೊಯಂಬತ್ತೂರು ಪೊಳ್ಳಾಚಿ ಶಾಖೆ ಈ ನಷ್ಟ ಪರಿಹಾರ ನೀಡಬೇಕಾಗಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶರತ್ ದೀರ್ಘಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು.

NO COMMENTS

LEAVE A REPLY