ಶಾಲೆಗಳಲ್ಲಿ ಇನ್ನು ಮುಖ್ಯೋಪಾಧ್ಯಾಯರ ಬದಲಾಗಿ ಪ್ರಾಂಶುಪಾಲರು

0
16

 

ತಿರುವನಂತಪುರ: ಶಾಲೆಗಳಲ್ಲಿ ೧ರಿಂದ ೧೨ರವರೆಗಿನ ತರಗತಿಗಳಿಗೆ ಏಕೀಕೃತ ಆಡಳಿತ ವ್ಯವಸ್ಥೆ ಜ್ಯಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ಇದರಂತೆ ಇನ್ನು ಶಾಲೆಗಳ ಮೇಧಾವಿ ಪ್ರಾಂಶುಪಾಲರಾಗಿರುವರು ಎಂದು ಅಧ್ಯಾಪಕ ಸಂಘಟನೆಯ ನೇತಾರರ ಸಭೆಯಲ್ಲಿ ಅವರು ನುಡಿದರು.

ಕಾಲೇಜುಗಳಿಂದ ಪ್ರಿಡಿಗ್ರಿಯನ್ನು ಬೇರ್ಪಡಿಸಿರುವುದು ಅದನ್ನು ಶಾಲಾ ಶಿಕ್ಷಣದ ಅಂಗವಾಗಿ ಮಾಡಲಾಗಿದೆ. ತಾತ್ಕಾಲಿಕ ವ್ಯವಸ್ಥೆ ಎಂಬ ನೆಲೆಯಲ್ಲಿ ಹೈಯರ್ ಸೆಕೆಂಡರಿ ಡೈರೆಕ್ಟರೇಟ್ ರೂಪೀಕರಿಸಲಾಗಿತ್ತು. ಇದರಂತೆ ಒಂದೇ ಸಂಸ್ಥೆಯಲ್ಲಿ ಎರಡು ಮೇಧಾವಿಗಳಿರುವುದು ಗುಣಕರವಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಅನುದಾನಿತ ಶಾಲೆಗಳಿಗೆ ಸರಕಾರಿ ಅನುದಾನಿತ ಶಾಲೆ ಎಂಬ ಹೆಸರು ನೀಡಬೇಕೆಂಬ ಅಧ್ಯಾಪಕರ ನಿರ್ದೇಶವನ್ನು ಪರಿಗಣಿಸುವು ದಾಗಿಯೂ  ಮುಖ್ಯಮಂತ್ರಿ ತಿಳಿಸಿದ್ದಾರೆ. ಅಧ್ಯಯನ ದಿನಗಳನ್ನು ಹೆಚ್ಚಿಸುವುದಕ್ಕೆ ಒಟ್ಟಾದ ಯತ್ನ ಅಗತ್ಯವಿದೆ ಎಂದೂ ಮುಖ್ಯಮಂತ್ರಿ ಇದೇ ವೇಳೆ ನುಡಿದರು.

NO COMMENTS

LEAVE A REPLY