ಪದವಿ ವಿದ್ಯಾರ್ಥಿನಿಗೆ ಅಪಮಾನಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಪ್ರಭಾರ ಪ್ರಾಂಶುಪಾಲ ಸೆರೆ

0
23

ಕಾಸರಗೋಡು: ಪದವಿ ವಿದ್ಯಾ ರ್ಥಿನಿಯನ್ನು ಅಪಮಾನಿಸಲು ಯತ್ನಿಸಿ ರುವುದಾಗಿ ನೀಡಿದ ದೂರಿನಂತೆ ಪರವನಡ್ಕ ಸರಕಾರಿ ಎಚ್‌ಎಸ್ ಎಎಸ್‌ನ ಪ್ರಾಂಶು ಪಾಲರ ಹೊಣೆ ವಹಿಸಿಕೊಂಡಿರುವ ಕುಂಡಂಗುಳಿ ನಿವಾಸಿ ರತ್ನಾಕರನ್ (೪೨)ರನ್ನು ಕಾಸರಗೋಡು ಪ್ರಿನ್ಸಿಪಲ್ ಎಸ್‌ಐ ಪಿ. ಅಜಿತ್ ಕುಮಾರ್ ಬಂಧಿಸಿದ್ದಾರೆ. ಈತನ ವಿರುದ್ಧ ೩೫೪ ಎ ಪ್ರಕಾರ ಕೇಸು ದಾಖಲಿಸಲಾಗಿದೆ. ಬಿಬಿಎಂ ವಿದ್ಯಾ ರ್ಥಿನಿಯಾದ ಯುವತಿ ಪ್ರಥಮ ವರ್ಷದ ಪದವಿ ಸಪ್ಲಿಮೆಂಟ್ ಪರೀಕ್ಷೆ ಬರೆಯಲು ಪರವನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಇತ್ತೀಚೆಗೆ ತಲುಪಿದ್ದಳು. ಪರೀಕ್ಷೆಗೆ ಹಾಜರಾಗುವಾಗ ಹಾಲ್ ಟಿಕೆಟ್ ತೆಗೆದುಕೊಳ್ಳಲು ಮರೆತ ಕಾರಣ ಹಾಲ್ ಟಿಕೆಟ್‌ನ್ನು ನಿನ್ನೆ ತಂದು ತೋರಿಸಬೇಕೆಂಬ ಒಪ್ಪಂದ ಪ್ರಕಾರ ಪರೀಕ್ಷೆ ಬರೆಯಲುಪ್ರಾಂಶುಪಾಲರು ಒಪ್ಪಿಗೆ ನೀಡಿದ್ದರು. ಇದರಂತೆ ನಿನ್ನೆ ಹಾಲ್‌ಟಿಕೇಟ್ ಸಹಿತ ವಿದ್ಯಾರ್ಥಿನಿ  ಶಾಲೆಗೆ ತಲುಪಿದ್ದಳು. ಈ ವೇಳೆ ವಿದ್ಯಾರ್ಥಿನಿ ಕುಳಿತ ಸ್ಥಳದ ಹತ್ತಿರವೇ ಬಂದು ಕುಳಿತ ಪ್ರಾಂಶುಪಾಲರು ಆಕೆ ಯೊಂದಿಗೆ ಅನಗತ್ಯ ಮಾತುಗಳನ್ನಾಡಿ ಅಪಮಾನಗೈಯ್ಯಲು ಯತ್ನಿಸಿರುವು ದಾಗಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಪ್ರಾಂಶುಪಾಲರನ್ನು ವಶಕ್ಕೆ ತೆಗೆದುಕೊಂಡರು. ಇದಕ್ಕೂ ಮೊದಲು ಸ್ಥಳೀಯರ ಆಕ್ರಮಣದಿಂದ ಗಾಯಗೊಂಡ ರತ್ನಾಕರನನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

NO COMMENTS

LEAVE A REPLY