ಬಿಜೆಪಿ ಕಾರ್ಯಕರ್ತನ ಬಾವಿ ನೀರಿನಲ್ಲಿ ವಿಷ

0
30

ಕಾಸರಗೋಡು: ಬಿಜೆಪಿ ಕಾರ್ಯ ಕರ್ತನ ಮನೆ ಬಳಿಯ ಕುಡಿಯುವ ನೀರಿನ ಬಾವಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿದ ಘಟನೆ ನಡೆದಿದೆ.

ಉದುಮ ಬಳಿಯ ಏರೋಲ್‌ಕುಂಡ್‌ನ ಅನಿಲ್ ಕುಮಾರ್‌ರ ಮನೆ ಬಳಿಯ ಬಾವಿಯಲ್ಲಿ ವಿಷಾಂಶ ಕಂಡು ಬಂದಿದೆ. ಇಂದು ಬೆಳಿಗ್ಗೆ ಬಾವಿಯಿಂದ ನೀರೆತ್ತಿದಾಗ ಬಣ್ಣ ವ್ಯತ್ಯಾಸ ಹಾಗೂ ದುರ್ನಾತ ಬೀರುತ್ತಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ. ಈ ಭಾಗದಲ್ಲಿ ಕಿಡಿಗೇ ಡಿಗಳ ಕೃತ್ಯ ವ್ಯಾಪಕಗೊಂಡಿರುವುದಾಗಿ  ಈ ಹಿಂದೆಯೇ ದೂರಲಾಗಿದೆ.

೨೦೧೬ ಅಕ್ಟೋಬರ್ ೩೦ರಂದು ರಾತ್ರಿ ಅನಿಲ್ ಕುಮಾರ್‌ರ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನ್ನು ಕಿಡಿಗೇಡಿಗಳು ಕಿಚ್ಚಿಟ್ಟು ನಾಶಗೊಳಿಸಿ ದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಇದುವರೆಗೆ ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.  ಇದೀಗ ಮತ್ತೆ ಕಿಡಿಗೇಡಿಗಳು ಬಾವಿಯಲ್ಲಿ ವಿಷಾಂಶ ಬೆರೆಸಿದ ಕೃತ್ಯವನ್ನು ಬಿಜೆಪಿ ಉದುಮ ಮಂಡಲ ಸಮಿತಿ ಖಂಡಿಸಿದೆ. ಆರೋಪಿಯನ್ನು ಕೂಡಲೇ ಪತ್ತೆಹಚ್ಚಬೇಕೆಂದು ಪೊಲೀಸರಲ್ಲಿ ಒತ್ತಾಯಿಸಿದೆ.

NO COMMENTS

LEAVE A REPLY