ಧಾರಾಕಾರ ಮಳೆ: ಜಿಲ್ಲೆಯಲ್ಲಿ ವ್ಯಾಪಕ ನಾಶನಷ್ಟ; ನೆರೆ, ಭೂಕುಸಿತ, ಬಿರುಗಾಳಿಗೆ ಸಾಧ್ಯತೆ

0
23

ಕಾಸರಗೋಡು: ಮಳೆ ನಿನ್ನೆಯಿಂದ ಬಿರುಸುಗೊಂಡಿರು ವಂತೆಯೇ ಜಿಲ್ಲೆಯ ಹಲವೆಡೆಗಳಲ್ಲಿ ಭಾರೀ ನಾಶನಷ್ಟಗಳೂ ಉಂಟಾಗಿವೆ. ಬಿರುಗಾಳಿಗೆ ಹಲವೆಡೆಗಳಲ್ಲಿ ಮರಗಳು ರಸ್ತೆಗಳಿಗೆ ಬಿದ್ದು ಸಾರಿಗೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಮಾಯಿಪ್ಪಾಡಿಯಲ್ಲಿ ಸುಧಾಕರನ್ ಎಂಬವರ ಮನೆಯ ಒಂದು ಭಾಗಕ್ಕೆ ಕಲ್ಲಿನಗೋಡೆ ಕುಸಿದು ಬಿದ್ದಿದೆ. ಆದರೆ ಮನೆಗೆ ಹೆಚ್ಚಿನ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಮನೆಯವರೂ ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ವಿದ್ಯಾನಗರ ಪೊಲೀಸರು ತುರ್ತಾಗಿ ಘಟನೆ ಸ್ಥಳಕ್ಕೆ ತಲುಪಿ ಪರಿಶೀಲಿಸಿದ್ದಾರೆ. ಚೆರ್ಕಳ ಸಮೀಪದ ಕೆಟ್ಟುಂಗಲ್‌ಲ್ಲಿ ನಿನ್ನೆ ರಾತ್ರಿ ೧೧.೩೦ರ ವೇಳೆಗೆ ರಸ್ತೆಗೆ ಮರವೊಂದು ಕುಸಿದು ಬಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದೆ. ಮಾತ್ರವಲ್ಲ ಕಾಸರಗೋಡು ನಗರದ ಸಿಟಿಗೋಲ್ಡ್ ಚಿನ್ನದಂಗಡಿ ಬಳಿಯ ರಸ್ತೆಗೆ ನಿನ್ನೆ ಸಂಜೆ ಮರದ ರೆಂಬೆ ಮುರಿದು ಬಿದ್ದು  ವಾಹನ ಸಂಚಾರಕ್ಕೂ ಅಡಚಣೆ ಸೃಷ್ಟಿಸಿದೆ. ಮುಳ್ಳೇರಿಯದಲ್ಲಿ ಪೂವಡ್ಕ ಪೆಟ್ರೋಲ್ ಬಂಕ್ ಬಳಿ ಇಂದು ಬೆಳಿಗ್ಗೆ ೬.೩೦ಕ್ಕೆ ಮರ ಕುಸಿದು ಬಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಎಲ್ಲಾ ಪ್ರದೇಶಗ ಳಿಗೂ ಕಾಸರಗೋಡು ಅಗ್ನಿಶಾಮಕದಳ ತುರ್ತಾಗಿ ತಲುಪಿ ರಸ್ತೆಗೆ ಬಿದ್ದ ಮರಗಳನ್ನು ಮುರಿದು ಬದಿಗೆ ಸರಿಸುವ ಮೂಲಕ ಸಾರಿಗೆ ಸಂಚಾರ ಸುಗಮಗೊಳಿಸಿದ್ದಾರೆ. ಇದು ಮಾತ್ರವಲ್ಲದೆ ಜಿಲ್ಲೆಯ ಹಲವಡೆಗ ಳಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜೂನ್ ೧೧ರ ತನಕ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಮಾತ್ರವಲ್ಲ ನೆರೆ ಹಾವಳಿ ಮತ್ತು ಭೂಕುಸಿತ ಉಂಟಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅಗತ್ಯದ ಮುಂಜಾಗ್ರ ತಾ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾ ರಿಗಳಿಗೆ ನಿರ್ದೇಶ ನೀಡಿದೆ. ಅದಕ್ಕೆ ಹೊಂದಿಕೊಂಡು ದುರಂತ ನಿವಾರಣಾ ಇಲಾಖೆಗೂ ಜಿಲ್ಲಾಧಿಕಾರಿಗಳು ಅಗತ್ಯದ ನಿರ್ದೇಶ ನೀಡಿದ್ದಾರೆ.

NO COMMENTS

LEAVE A REPLY