ಲೀಗ್ಗೆ ಶರಣಾದ ಕಾಂಗ್ರೆಸ್: ಮಾಣಿಗಾಗಿ ಕೈಬಿಟ್ಟ ರಾಜ್ಯಸಭಾ ಸ್ಥಾನ; ಯುಡಿಎಫ್, ಕಾಂಗ್ರೆಸ್ನಲ್ಲಿ ಅಂತಃಕಲಹ

0
14

ತಿರುವನಂತಪುರ: ಕಾಂಗ್ರೆಸ್‌ನ  ರಾಜ್ಯಸಭಾ ಸ್ಥಾನಕ್ಕಾಗಿ ಪಕ್ಷದ ಹಿರಿಯ ಮತ್ತು ಯುವ ನೇತಾರರು ಪರಸ್ಪರ ಕಿತ್ತಾಟದಲ್ಲಿ ತೊಡಗಿರುವಂತೆ ಮುಸ್ಲಿಂ ಲೀಗ್‌ನ ಒತ್ತಡಕ್ಕೆ ಮಣಿದು ತನ್ನ ಸ್ವಂತ ಸೀಟನ್ನು ಕೆ.ಎಂ. ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ)ಗೆ ಬಿಟ್ಟುಕೊಡಬೇಕಾದ ಗತಿಗೇಡು ಕಾಂಗ್ರೆಸ್‌ಗೆ ಉಂಟಾಗಿದೆ. ಆಮೂಲಕ ಲೀಗ್ ಹೇರಿದ ಒತ್ತಡಕ್ಕೆ ಕಾಂಗ್ರೆಸ್  ಪೂರ್ಣವಾಗಿ ಶರಣಾಗಬೇಕಾಗಿಬಂದಿದೆ.

ಕೇರಳ ಕಾಂಗ್ರೆಸ್ (ಎಂ) ನ್ನು ಮತ್ತೆ  ಯುಡಿಎಫ್ ಪಾಳಯಕ್ಕೆ ಸೇರ್ಪಡೆ ಗೊಳಿಸುವ ಕುರಿತಾದ ಚರ್ಚೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆ ಯಲ್ಲಿ ನಿನ್ನೆ ದಿಲ್ಲಿಯಲ್ಲಿ ನಡೆದಿತ್ತು. ಅದರ ಮೊದಲು ಕಾಂಗ್ರೆಸ್‌ನ ರಾಜ್ಯಸಭಾ ಸೀಟು ತಮಗೆ ನೀಡಬೇಕೆಂಬ ಬೇಡಿಕೆಯನ್ನು ಕೇರಳ ಕಾಂಗ್ರೆಸ್ (ಎಂ) ನೇತಾರ ಕೆ.ಎಂ. ಮಾಣಿ ಮುಂದಿರಿಸಿದ್ದು ಅದಕ್ಕೆ ಮುಸ್ಲಿಂ ಲೀಗ್ ಕೂಡಾ  ಬೆಂಬಲ ನೀಡಿತ್ತು. ಮಾಣಿಗೆ ರಾಜ್ಯಸಭಾ ಸೀಟು ನೀಡಿ ಆ ಮೂಲಕ   ಯುಡಿಎಫ್‌ನ್ನು ಬಲಪಡಿಸಬೇಕೆಂದು ಮುಸ್ಲಿಂ ಲೀಗ್ ತಿಳಿಸಿತ್ತು. ಅದಕ್ಕೆ ಕಾಂಗ್ರೆಸ್ ಕೊನೆಗೂ ಮಣಿದು ತಮ್ಮ ರಾಜ್ಯಸಭಾ ಸ್ಥಾನವನ್ನು ಕೇರಳ ಕಾಂಗ್ರೆಸ್ (ಎಂ)ಗೆ ಬಿಟ್ಟು ಕೊಡಲು ರಾಹುಲ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಚರ್ಚೆಯಲ್ಲಿ ತೀರ್ಮಾನಿಸಲಾಯಿತು. ಇದರಿಂದ ಕಾಂಗ್ರೆಸ್‌ನ ಕೈಗೆ ಬಂದ ತುತ್ತು ಕೇರಳಾ ಕಾಂಗ್ರೆಸ್‌ನ ಬಾಯಿಗೆ ಸೇರುವ ಸ್ಥಿತಿಯುಂಟಾಗಿದೆ.

ತಮ್ಮ ಸೀಟನ್ನು ಕೇರಳ ಕಾಂಗ್ರೆಸ್ (ಎಂ)ಗೆ ಬಿಟ್ಟುಕೊಟ್ಟ ತೀರ್ಮಾನ ಕಾಂಗ್ರೆಸ್‌ನ ರಾಜ್ಯಘಟಕ ಮತ್ತು ಯುಡಿಎಫ್‌ನಲ್ಲಿ  ತೀವ್ರ ಅಸಂತೃಪ್ತಿ ಸ್ಫೋಟಗೊಂಡಿದ್ದು, ಇದನ್ನು  ಪ್ರತಿಭಟಿಸಿ ಕಾಂಗ್ರೆಸ್‌ನ ಹಲವು ನೇತಾರರು ರಂಗಕ್ಕಿಳಿದಿದ್ದಾರೆ. ರಾಜ್ಯಸಭಾ ಸೀಟಿಗಾಗಿ ಯುಡಿಎಫ್‌ನ ಇತರ ಘಟಕ ಪಕ್ಷಗಳು ಈಹಿಂದೆಯೇ ಬೇಡಿಕೆ ಮುಂದಿರಿಸಿ ದ್ದವು. ಈ ವಿಷಯದಲ್ಲಿ ಕಾಂಗ್ರೆಸ್ ಕೈಗೊಂಡ ನಿಲುವು ಘಟಕ ಪಕ್ಷಗಳನ್ನು ತೀವ್ರ ಆಕ್ರೋಶಕ್ಕೊಳಪಡಿಸಿದೆ. ಯುಡಿಎಫ್  ರಾಜ್ಯ ಸಮಿತಿ ಸಭೆ ಇಂದು ನಡೆಯಲಿದ್ದು, ಅದರಲ್ಲಿ ಈ ವಿಷಯ  ವಿವಾದವಾಗಲಿದೆ.

NO COMMENTS

LEAVE A REPLY