ಶಾಲೆ ಬಳಿ ಸುತ್ತಾಡುತ್ತಿದ್ದ ಬೈಕ್: ಪ್ರಶ್ನಿಸಿದ ಹೋಂಗಾರ್ಡ್ಗೆ ಹಲ್ಲೆ

0
17

ಮಂಜೇಶ್ವರ: ಕರ್ತವ್ಯನಿರತ ಹೋಮ್‌ಗಾರ್ಡ್‌ನನ್ನು ದೂಡಿ ಹಾಕಿ ಅಕ್ರಮಿ ಬೈಕ್‌ನಲ್ಲಿ ಪರಾರಿ ಯಾದ ಬಗ್ಗೆ ದೂರಲಾಗಿದೆ. ನಿನ್ನೆ ಸಂಜೆ ೪ ಗಂಟೆಗೆ ಉಪ್ಪಳ ಶಾಲಾ ಪರಿಸರದಲ್ಲಿ ಘಟನೆ ನಡೆದಿದೆ. ಮಂಜೇಶ್ವರ ಠಾಣೆಯ ಹೋಮ್ ಗಾರ್ಡ್ ಮಣಿ ಎಂಬವರ ಮೇಲೆ ಹಲ್ಲೆಗೈಯ್ಯಲಾಗಿದೆ. ಶಾಲೆ ಬಿಡುವ ಹೊತ್ತಿನಲ್ಲಿ ನಂಬ್ರ ಪ್ಲೇಟಿಲ್ಲದ ಬೈಕ್‌ನಲ್ಲಿ ಯುವಕನೋರ್ವ ಅತ್ತಿತ್ತ ಪದೇ ಪದೇ ಸುತ್ತಾಡುತ್ತಿದ್ದನು. ಈ ವೇಳೆ ಅಲ್ಲಿ ಕರ್ತವ್ಯನಿರತರಾಗಿದ್ದ ಹೋಂಗಾರ್ಡ್ ಮಣಿ ತಡೆದು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ನಲ್ಲಿದ್ದಾತ ಹಲ್ಲೆಗೈದು ದೂಡಿಹಾಕಿ ಪರಾರಿಯಾಗಿ ರುವುದಾಗಿ ದೂರಲಾಗಿದೆ. ಇದರಂತೆ ಉಪ್ಪಳ ಬಳಿಯ ಸಮನ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬೈಕ್ ಉಪ್ಪಳ ಬಳಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.

NO COMMENTS

LEAVE A REPLY