ಪತಿಯ ಅಗಲಿಕೆ ಬೆನ್ನಲ್ಲೇ ಮನೆ ಕುಸಿತ: ಕುಟುಂಬಕ್ಕೆ ಸಂಕಷ್ಟ

0
23
Exif_JPEG_420

ಉಪ್ಪಳ: ‘ಮಿಂಚು ಬಡಿದು ಬಿದ್ದಿದ್ದವನಿಗೆ  ಹಾವು ಕಚ್ಚಿತು’ ಎಂಬ ಗಾದೆ ಮಾತಿದೆ. ಇದು ಈಗ ಅಗರ್ತಿ ಮೂಲೆ ನಿವಾಸಿ ಮಂಜುಳಾರ ವಿಷಯದಲ್ಲಿ ಸತ್ಯವಾಗಿದೆ. ಇತ್ತೀಚೆಗೆ ಪತಿ ಮೃತಪಟ್ಟ ಮಂಜುಳಾರ ಮನೆ ನಿನ್ನೆ ಮಧ್ಯರಾತ್ರಿ ಕುಸಿದುಬಿದ್ದು, ಕುಟುಂಬಕ್ಕೆ ಮತ್ತೊಂದು ಆಘಾತವುಂಟಾಗಿದೆ.

ಕಳೆದ ಎಪ್ರಿಲ್ ೨೨ರಂದು ಬೆಳಿಗ್ಗೆ ಬೇಕೂರು ಬಳಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ  ಗಿರೀಶ್ ಆಚಾರ್ಯರ ಮೃತದೇಹ ಕಂಡುಬಂದಿತ್ತು. ಆಬಳಿಕ ಇವರ ಪತ್ನಿ ಮಂಜುಳಾ ಹಾಗೂ ಇಬ್ಬರು ಮಕ್ಕಳ ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ಸಿಮೆಂಟ್ ಶೀಟ್ ಹಾಕಿದ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಇವರು ಸಮೀಪದ ತಾಯಿ ಮನೆಯಲ್ಲಿ ಉಳಿದು ಕೊಂಡಿರುವ ಕಾರಣ ಸಂಭವನೀಯ ದುರಂತ ತಪ್ಪಿಹೋಗಿದೆ. ಮನೆಯ ಮಾಡು ಕುಸಿದುಬಿದ್ದ ಕಾರಣ ಮನೆಯೊಳಗಿದ್ದ ದಾಖಲೆಪತ್ರಗಳು, ಬಟ್ಟೆಬರೆ ಮೊದಲಾದ ಸಾಮಗ್ರಿಗಳು ನಾಶವಾಗಿದೆ. ಸಂಕಷ್ಟಮಯ ಜೀವನ ನಡೆಸುತ್ತಿ ರುವ ಈ ಬಡ ಕುಟುಂಬಕ್ಕೆ ಸಹೃದಯರ  ಸಹಾಯಹಸ್ತ ಚಾಚಬೇಕಿದೆ.

NO COMMENTS

LEAVE A REPLY