ಅಡೂರು ನಿವಾಸಿ ನಾಪತ್ತೆ: ಪಯಸ್ವಿನಿ ಹೊಳೆಯಲ್ಲಿ ಶೋಧ ಮುಂದುವರಿಕೆ

0
20

ಅಡೂರು: ಅಡೂರು ನಿವಾಸಿ ಯೊಬ್ಬರು ಮೊನ್ನೆ ಸಂಜೆಯಿಂದ ನಾಪತ್ತೆಯಾಗಿದ್ದು ಪಯಸ್ವಿನಿ ಹೊಳೆಯಲ್ಲಿ ನೀರಿನ ಸೆಳೆತಕ್ಕೆ  ಸಿಲುಕಿರಬಹುದೇ ಎಂಬ ಸಂಶಯದ ಮೇರೆಗೆ ಶೋಧ ನಡೆಯುತ್ತಿದೆ.

ಅಡೂರು ಚರ್ಲಕೈ ನಿವಾಸಿ ಚನಿಯ ನಾಯ್ಕ(೬೫) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.  ಇವರು ಮೊನ್ನೆ ಸಂಜೆ ಸಾಮಗ್ರಿ ತರಲೆಂದು ತಿಳಿಸಿ ಗಾಳಿಮುಖದ ಅಂಗಡಿಗೆ ತೆರಳಿದ್ದಾರೆ. ಆದರೆ ಇದುವರೆಗೆ ಮರಳಿ ಬಂದಿಲ್ಲ. ಅವರ ಬಗ್ಗೆ ಯಾವುದೇ ಸುಳಿವು ಇಲ್ಲವೆನ್ನಲಾಗಿದೆ.  ಗಾಳಿಮುಖಕ್ಕೆ ತೆರಳಬೇಕಾದರೆ ಅವರಿಗೆ ಪಯಸ್ವಿನಿ ಹೊಳೆ ದಾಟಬೇಕಾಗಿದೆ. ಮೊನ್ನೆ ಸಂಜೆ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಇದರಿಂದ ನೀರಿನ ಸೆಳೆತಕ್ಕೆ ಸಿಲುಕಿರಬಹುದೇ ಎಂಬ ಸಂಶ ಯವುಂಟಾಗಿದೆ. ಚನಿಯ  ನಾಯ್ಕರ ನಾಪತ್ತೆ ಬಗ್ಗೆ ಪುತ್ರ ರಮೇಶ್ ನಿನ್ನೆ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಕಾಸರಗೋಡಿ ನಿಂದ ಅಗ್ನಿಶಾಮಕದಳ ತಲುಪಿ ಪಯಸ್ವಿನಿ ಹೊಳೆಯಲ್ಲಿ ರಾತ್ರಿವರೆಗೆ ಶೋಧ ನಡೆಸಿದೆ. ಇಂದು ಬೆಳಿಗ್ಗೆ ಮತ್ತೆ ಹುಡುಕಾಟ  ಮುಂದುವರಿಸಲಾಗಿದೆ. ಚನಿಯ ನಾಯ್ಕರ ನಾಪತ್ತೆ ಬಗ್ಗೆ ಆದೂರು ಪೊಲೀಸರು ಇತರ ಠಾಣೆಗೆ ಮಾಹಿತಿ ನೀಡಿದ್ದಾರೆ.

NO COMMENTS

LEAVE A REPLY