ಶಾಲೆ ಪರಿಸರದ ಅಂಗಡಿಗಳಿಂದ ಸಿಗರೇಟ್, ಪಾನ್ಮಸಾಲೆ ವಶ: ಮೂವರ ಬಂಧನ

0
16

ಕುಂಬಳೆ: ಶಾಲೆ ಪರಿಸರದ ಅಂಗಡಿಗಳಿಂದ ಸಿಗರೇಟ್ ಹಾಗೂ ಪಾನ್ ಮಸಾಲೆ ವಶಪಡಿಸಿಕೊಂಡು ಮೂವರನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ.

ಮೊಗ್ರಾಲ್‌ನಿಂದ ಅಬೂಬಕರ್ ಸಿದ್ದಿಕ್ (೪೫) ಹಾಗೂ ಅಶ್ರಫ್.ಎಂ(೪೧) ಎಂಬಿವರನ್ನು ಬಂಧಿಸಿ ಇವರಿಂದ ತಲಾ ೧೮ ಪ್ಯಾಕೆಟ್ ಸಿಗರೇಟ್ ವಶಪಡಿಸಲಾಗಿದೆ.  ನಿನ್ನೆ ಅಪರಾಹ್ನ ಕುಂಬಳೆ ಎಸ್.ಐ ಟಿ.ವಿ. ಅಶೋಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಸಿಗರೇಟ್ ವಶಪಡಿಸಿ ಇಬ್ಬರನ್ನು ಬಂಧಿಸಿದ್ದರು. ಇದೇ  ವೇಳೆ ತಂಡವೊಂದು ಪೊಲೀಸರಿಗೆ ತಡೆಯೊಡ್ಡಿ ಬಂಧಿತರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ತಂಡ ಪೊಲೀಸರಿಗೆ ಬೆಂಬಲ ಸೂಚಿಸಿದ್ದು, ಇದರಿಂದ ತಡೆಯೊಡ್ಡಿದ ತಂಡ ಹಿಂಜರಿದಿದೆ.

ಬಂದ್ಯೋಡು ಜಂಕ್ಷನ್‌ನಿಂದ ೧೬೦ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿಕೊಂಡು ಇಚ್ಚಿಲಂಗೋಡು ನಿವಾಸಿ ಕೃಷ್ಣ ಶೆಟ್ಟಿ (೬೯)ರನ್ನು ಬಂಧಿಸಲಾಗಿದೆ. ಎಸ್.ಐ ಜಯರಾಜ್ ನೇತೃತ್ವದಲ್ಲಿ ನಿನ್ನೆ ಸಂಜೆ ದಾಳಿ ನಡೆಸಲಾಗಿದೆ.

NO COMMENTS

LEAVE A REPLY