ಎಸ್ಡಿಪಿಐ ನೇತಾರರಿಗೆ ಜುಲ್ಮಾನೆ

0
13

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಪತಾಕೆ ಸ್ಥಾಪಿಸಲು ಹೊಂಡ ತೋಡಿದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐಯ ನಾಲ್ವರು ನೇತಾರರಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾ ಲಯ ತಲಾ ೪೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಉಳಿಯತ್ತಡ್ಕ ಸಕರಿಯ ಎ.ಕೆ, ಕೂಡ್ಲಿನ ಅಬ್ದುಲ್ಲ ಬಿ, ಆಲಂಪಾಡಿ ಎರ್ಮಾಳಂನ ಅಬ್ದುಲ್ ಖಾದರ್ ಎ. ಮತ್ತು ಉದುಮ ಪಾಕ್ಯಾರದ ಮೊಹಮ್ಮದ್ ಪಾಕ್ಯಾರ್ ಎಂಬೀ ನೇತಾರರಿಗೆ ಜುಲ್ಮಾನೆ ವಿಧಿಸಲಾಗಿದೆ.

೨೦೧೫ ದಶಂಬರ್ ೨೮ರಂದು ಕಾಸರಗೋಡು ಅಣಂಗೂರಿನ ರಾಷ್ಟ್ರೀಯ ಹೆದ್ದಾರಿಯ ವಿಭಾಜಕದಲ್ಲಿ ಪತಾಕೆ ಸ್ಥಾಪಿಸಲೆಂದು ಹೊಂಡ ತೋಡಿ ದುದಕ್ಕೆ ಸಂಬಂಧಿಸಿ  ನಾಲ್ವರು ನೇತಾ ರರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಅವರಿಗೆ ಜುಲ್ಮಾನೆ ವಿಧಿಸಿದೆ.

NO COMMENTS

LEAVE A REPLY