ಟ್ರಾಲಿಂಗ್ ನಿಷೇಧ ಇಂದಿನಿಂದ

0
19

ಕಾಸರಗೋಡು: ಇಂದು ಮಧ್ಯರಾತ್ರಿ ಯಿಂದ ಜುಲೈ ೩೧ರ ವರೆಗೆ ಟ್ರಾಲಿಂಗ್ ನಿಷೇಧ ಹೇರ ಲಾಗಿದೆ. ಎಡಿಎಂ  ಎನ್. ದೇವೀ ದಾಸ್‌ರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಈ ತೀರ್ಮಾವುಂಟಾಗಿದೆ.

ರಾಜ್ಯದ ಸಮುದ್ರ ಭಾಗದ ೧೨ ನೋಟಿಕಲ್ ಮೈಲ್ ದೂರದಲ್ಲಿ ಟ್ರಾಲಿಂಗ್ ನಿಷೇಧಿಸಲಾಗಿದೆ. ಕಳೆದ ಬಾರಿಗಿಂತ ೫ ದಿನ ಹೆಚ್ಚುವರಿಯಾಗಿ ಈಬಾರಿ ನಿಷೇಧ ಮುಂದುವರಿ ಯಲಿದೆ.  ಒಟ್ಟು ೫೨ ದಿನಗಳಾಗಿ ರುತ್ತದೆ. ಈ ದಿನಗಳಲ್ಲಿ ಇನ್ ಬೋರ್ಡ್, ಪರಂಪರಾಗತ ದೋಣಿ ಗಳಿಗೆ ಮೀನುಗಾರಿಕೆಗೆ ತಡೆಯಿಲ್ಲ. ಆದರೆ ಇನ್ ಬೋರ್ಡ್ ದೋಣಿ ಗಳ ಜೊತೆ ೧ ಕ್ಯಾರಿಯರ್ ದೋಣಿ ಯನ್ನು ಮಾತ್ರವೇ ಕೊಂಡು ಹೋಗಲು ಅವಕಾಶವಿದೆ. ಈ ಕಾಲಾವಧಿಯಲ್ಲಿ ನಿರುದ್ಯೋಗಿ ಗಳಾಗಿರುವ ಮೀನು ಕಾರ್ಮಿಕರಿಗೆ ಉಚಿತ ರೇಶನ್ ನೀಡಲಾಗುವುದು.

NO COMMENTS

LEAVE A REPLY