ಜ್ಯುವೆಲ್ಲರಿಯಿಂದ ಹಾಡಹಗಲೇ ಚಿನ್ನಾಭರಣ ಕಳವು

0
26

ಹೊಸದುರ್ಗ: ಜ್ಯುವೆಲ್ಲರಿಯೊಂದಕ್ಕೆ ಹಾಡಹಗಲೇ ನುಗ್ಗಿದ ಕಳ್ಳರು ಮೂರೂವರೆ ಕಿಲೋ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಪಳಯಂಗಾಡಿ ಪೇಟೆಯಲ್ಲಿ ಬಸ್ ನಿಲ್ದಾಣ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುವ ಜ್ಯುವೆಲ್ಲರಿಯಿಂದ ಕಳವು ನಡೆದಿದೆ. ನಿನ್ನೆ ಮಧ್ಯಾಹ್ನ ೧ ಗಂಟೆಗೆ ಜ್ಯುವೆಲ್ಲರಿ ಮುಚ್ಚಿ ಮಾಲಕ ಕಣ್ಣೂರು ನಿವಾಸಿ ಎ.ಪಿ. ಇಬ್ರಾಹಿಂ ಹಾಗೂ ಇಬ್ಬರು ನೌಕರರು ಮಸೀದಿಗೆ ತೆರಳಿದ್ದರು. ೨ ಗಂಟೆಗೆ ಅವರು ಮರಳಿದಾಗ ಕಳ್ಳರು ನುಗ್ಗಿದ ವಿಷಯ ತಿಳಿದು ಬಂದಿದೆ.  ಜ್ಯುವೆಲ್ಲರಿ ಮುಂದೆ ಬಟ್ಟೆ ಕಟ್ಟಿ, ಸಿ.ಸಿ ಟಿವಿ ಕ್ಯಾಮರಾಕ್ಕೆ ಸ್ಪ್ರೆ ಬಣ್ಣ ಬಲಿದು, ಎರಡು ಬೀಗ  ಮುರಿದು ಕಳ್ಳರು ಒಳಕ್ಕೆ ನುಗ್ಗಿದ್ದಾರೆ. ಕಪಾಟಿನಲ್ಲಿದ್ದ  ೩.೪ ಕಿಲೋ ಚಿನ್ನ, ೨ ಲಕ್ಷ ರೂ., ಎಟಿಎಂ ಕಾರ್ಡ್, ದಾಖಲೆ ಪತ್ರಗಳನ್ನು ಹಾಗೂ ಸಿ.ಸಿ ಟಿ.ವಿ ಕಂಪ್ಯೂಟರ್‌ಗಳನ್ನು ಕಳ್ಳರು ದೋಚಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY