೩೦೦ ಗ್ರಾಂ ಗಾಂಜಾ ಸಹಿತ ಓರ್ವ ಬಂಧನ: ಗಾಂಜಾ ಸೇದುತ್ತಿದ್ದ ಇಬ್ಬರ ಸೆರೆ

0
19

ಕಾಸರಗೋಡು: ನಗರದಲ್ಲಿ ಜನರ ಸಂದಣಿ ಹೆಚ್ಚತೊಡ ಗಿದ್ದು, ಇದರ ಮರೆಯಲ್ಲಿ ಗಾಂಜಾ ಮುಂತಾದ ಮಾದಕ ವಸ್ತು ಮಾರಾಟವೂ ವ್ಯಾಪಕ ಗೊಂಡಿದೆ.

ನಿನ್ನೆ ಸಂಜೆ ನಗರದ ಜಿವಿಎಚ್‌ಎಸ್‌ಎಸ್ ಬಳಿಯಿಂದ ೩೦೦ ಗ್ರಾಂ ಗಾಂಜಾ ಸಹಿತ ಓರ್ವನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಚೆಟ್ಟುಂಗುಳಿ ಹಿದಾಯತ್ ನಗರ ನಿವಾಸಿ ಎಂ.ಕೆ. ಮುನೀರ್ (೩೬) ಎಂಬಾತನ ಕೈಯಿಂದ ಗಾಂಜಾ ವಶಪಡಿಸಿ ಆತನನ್ನು ಸೆರೆಹಿಡಿಯಲಾಗಿದೆ. ಇದೇ ವೇಳೆ ವಿದ್ಯಾನಗರ ಜಲಪ್ರಾಧಿಕಾರ ಕಚೇರಿ ಬಳಿ ಗಾಂಜಾ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ಸೆರೆಹಿಡಿದ್ದಾರೆ. ಚೆಟ್ಟುಂಗುಳಿಯ ಅಬ್ದುಲ್ ಅಸೀಸ್ (೩೮), ಕೋಟೆ ಕಣಿಯ ಹಸೈನಾರ್ (೩೭) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.

ಈದುಲ್ ಫಿತರ್ ಹಬ್ಬ ಸಮೀಪಿಸುತ್ತಿರುವಂತೆ ನಗರದಲ್ಲಿ ಜನರ ಸಂದಣಿ ತೀವ್ರಗೊಂ ಡಿದೆ. ಇದರಿಂದ ಪೊಲೀಸರ ಗಮನ ಪೂರ್ತಿ ಟ್ರಾಫಿಕ್  ನಿಯಂತ್ರಣದತ್ತ ಹರಿದಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಗಾಂಜಾ ಮುಂ ತಾದ ಮಾದಕವಸ್ತು ಮಾರಾಟ ತಂಡಗಳು ತೀವ್ರಗೊಂಡಿ ದೆಯೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY