ಮಧ್ಯವಯಸ್ಕನಿಗೆ ಹಲ್ಲೆ: ಸಹೋದರನ ವಿರುದ್ಧ ಕೇಸು

0
17

ಮಂಜೇಶ್ವರ: ಉಪ್ಪಳ ಬಳಿಯ ಕೋಡಿಬೈಲು ಅಬ್ದುಲ್ ಖಾದರ್‌ರ ಪುತ್ರ ಅಬ್ದುಲ್ ರಹ್ಮಾನ್(೪೬)ರಿಗೆ ಹಲ್ಲೆಗೈದ ದೂರಿನಂತೆ ಸಹೋದರ ನಾದ ಶಾಹುಲ್ ಹಮೀದ್ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ತಿಂಗಳ ೮ರಂದು ಮಧ್ಯಾಹ್ನ ಸ್ನಾನ ಮಾಡುತ್ತಿದ್ದಾಗ  ಶಾಹುಲ್ ಹಮೀದ್ ಹಲ್ಲೆ ನಡೆಸಿದ್ದು,  ಉರಿಯುತ್ತಿದ್ದ ಸೌದೆಯಿಂದ ದೇಹಕ್ಕೆ ಸುಟ್ಟು ಗಾಯಗೊಳಿಸಿ ರುವುದಾಗಿ ಅಬ್ದುಲ್ ರಹ್ಮಾನ್ ಆರೋಪಿಸಿದ್ದರು. ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಾವಿ ಒಡೆತನದ ಹೆಸರಲ್ಲಿ ಸಹೋದರರೊಳಗೆ ವಿವಾದ ಹುಟ್ಟಿಕೊಂಡಿದ್ದು, ಇದುವೇ ಹಲ್ಲೆಗೆ ಕಾರಣವೆಂದು ದೂರಲಾಗಿತ್ತು.

NO COMMENTS

LEAVE A REPLY