ಪೊಲೀಸ್ ಠಾಣೆಯಲ್ಲಿ ದಾಂದಲೆ ಆರೋಪಿಗೆ ಉತ್ತಮ ನಡತೆಗೆ ಶಿಕ್ಷೆ

0
18

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಯಲ್ಲಿ ೨೦೧೭ ದಶಂ ಬರ್ ೨೧ರಂದು ಮುಂಜಾನೆ ಪೊಲೀಸ್ ಠಾಣೆಯ ಜಿ.ಡಿ. ಕರ್ತವ್ಯದಲ್ಲಿದ್ದ ಎ.ಎಸ್.ಐ. ಉಣ್ಣಿಕೃಷ್ಣನ್ ಮತ್ತು ಕಾವಲು ಗಾರನ ಕರ್ತವ್ಯ ನಿರ್ವಹಣೆಗೆ ಅಡ್ಡಿ ತಂದು ಸಿಸಿ ಟಿವಿ ಕ್ಯಾಮರಾ ಮತ್ತು ಕಂಪ್ಯೂಟರ್‌ಗೆ ಹಾನಿ ಉಂಟುಮಾಡಿ ದಾಂದಲೆ ಸೃಷ್ಟಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಸಿಜೆಎಂ ನ್ಯಾಯಾಲಯ ಮೂರು ತಿಂಗಳ ಸಜೆ , ಉತ್ತಮ ನಡತೆಗಾಗಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮುಟ್ಟತ್ತೋಡಿ ಇಸ್ಸತ್ ನಗರ ನಿಷಾ ಕ್ವಾರ್ಟರ್ಸ್‌ನ ಶೈನು ಕುಮಾರ್ ಅಲಿ ಯಾಸ್ ಶಹನಾಜ್ (೨೪) ಎಂಬಾತ ನಿಗೆ ಈ ಶಿಕ್ಷೆ ವಿಧಿಸಿ ಆತನನ್ನು ಬಿಡುಗಡೆಗೊಳಿ ಸಲಾಗಿದೆ. ಈ ಮೂರು ತಿಂಗಳ ಕಾಲ ಆತನ ಪ್ರತಿ ಚಲನವಲನಗಳನ್ನು ಜಿಲ್ಲಾ ಪ್ರೊಬೆಷನರಿ ಅಧಿಕಾರಿ ಸದಾ ನಿಗಾ ಇರಿಸುವರು. ಈ ಅವಧಿಯಲ್ಲಿ ಆರೋಪಿ ಯಾವುದಾ ದರೂ ಕಾನೂನು ಬಾಹಿರ ಕತ್ಯಗಳಲ್ಲಿ ತೊಡಗಿದ್ದಲ್ಲಿ ಅದನ್ನು ಪ್ರೊಬೆಷನರಿ ಆಫೀಸರ್ ನ್ಯಾಯಾಲಯದ ಗಮನಕ್ಕೆ ತರುವರು. ಹಾಗೆ ನಡೆದಲ್ಲಿ ಆರೋಪಿ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

NO COMMENTS

LEAVE A REPLY