ರಾಜ್ಯದಲ್ಲಿ ಎಟಿಎಂ ದರೋಡೆ: ಉಗ್ರಗಾಮಿಗಳ ಕೈವಾಡ ಶಂಕೆ

0
19

ಕಾಸರಗೋಡು: ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಬ್ಯಾಂಕ್‌ಗಳ ಎಟಿಎಂಗಳನ್ನು ದರೋಡೆಗೈಯ್ಯುತ್ತಿರು ವುದರ ಹಿಂದೆ  ಉಗ್ರಗಾಮಿಗಳಾಗಿದ್ದಾ ರೆಂಬ ಶಂಕೆ ಪೊಲೀಸರಲ್ಲಿ ಉಂಟಾಗಿದೆ. 

ಎಟಿಎಂಗಳನ್ನು ಒಡೆದು ಅಪಹರಿಸಲಾಗುವ ಹಣವನ್ನು ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಗಳಿಗಾಗಿ ಬಳಸಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಮಧ್ಯ ಪ್ರದೇಶದಲ್ಲಿ ಎಟಿಎಂ ದರೋಡೆಗೈ ಯ್ಯಲು ಬಂದ ತಂಡವೊಂದನ್ನು ಪೊಲೀಸರು ಹಿಡಿಯಲು ಹೋದಾಗ ಆ ತಂಡದವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಆಗ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಹರಿಯಾಣ ಮೇಲತ್ತ್ ನಿವಾಸಿಗಳಾದ ಆದಿಲ್ ಖಾನ್(೨೫) ಮತ್ತು ರಾಜ್(೨೮)ರನ್ನು ಸೆರೆ ಹಿಡಿದಿದ್ದರು. ಆ ವೇಳೆ ಅವರ ಜತೆಗಿದ್ದ ಇತರ ಆರು ಮಂದಿ ದರೋಡೆಕೋರರು ತಪ್ಪಿಸಿಕೊಂಡಿದ್ದರು. ಕಾರು ಮತ್ತು ಬೈಕ್‌ಗಳಲ್ಲಾಗಿ ದರೋಡೆಕೋರರು ಆಗಮಿಸಿದ್ದು ಬಂಧಿತರಾದ ಇಬ್ಬರಿಂದ ಎ.ಕೆ ೪೭ ಬಂಧೂಕು ಮತ್ತು ಪಿಸ್ತೂಲ್ ಪೊಲೀಸರು ವಶಪಡಿಸಿಕೊಂಡಿದ್ದರು. ಅವರನ್ನು ಮಧ್ಯಪ್ರದೇಶ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಕೇರಳದಲ್ಲಿ ಎಟಿಎಂ ದರೋಡೆ ಮಾಹಿತಿ ಲಭಿಸಿದೆ. ಆ ಮಾಹಿತಿಯನ್ನು ಮಧ್ಯಪ್ರದೇಶ ಪೊಲೀಸರು ಕೇರಳ ಪೊಲೀಸರಿಗೆ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲೂ ಈ ಹಿಂದೆ ಹಲವು ಎಟಿಎಂ ದರೋಡೆ ಯತ್ನ ನಡೆದಿತ್ತು. ಪೆರಿಯದಲ್ಲಿರುವ ಕೆನರಾಬ್ಯಾಂಕ್‌ನ ಎಟಿಎಂ ಕೇಂದ್ರವನ್ನು ದರೋಡೆಕೋರರು ಒಡೆದು ಹಣ ದೋಚುವ ಯತ್ನ ನಡೆಸಿದ್ದರು. ಆದರೆ ಹಣ ಒಳಗೊಂ ಡ  ಪೆಟ್ಟಿಗೆಯನ್ನು ಒಡೆಯಲು ಸಾಧ್ಯವಾಗದೆ ಆ ಯತ್ನ ಉಪೇಕ್ಷಿಸಿದ್ದರು.  ಅದೇ ರೀತಿ ಕಣ್ಣೂರು, ಕಲ್ಲಿಕೋಟೆ ಮತ್ತು ಕೆಲವು ದಿನಗಳ ಹಿಂದೆ ಕೊಲ್ಲಂ ತಲುತ್ತಿಲಯಡ್ಕದಲ್ಲೂ ಎಟಿಎಂ ದರೋಡೆಯತ್ನ ನಡೆದಿತ್ತು.

ಈ ರೀತಿ ಎಟಿಎಂ ದರೋಡೆ ಗೈಯ್ಯುವ ಹಿಂದೆ ಉಗ್ರಗಾಮಿಗಳ ಕೈವಾ ಡವಿರುವುದಾಗಿ ಶಂಕೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡಾ ಈ ಬಗ್ಗೆ ಇನ್ನೊಂದೆಡೆ ಸಮಾನಾಂತರ ತನಿಖೆ ಆರಂಭಿಸಿದೆ.

ಎಟಿಎಂ ಕೇಂದ್ರಗಳಿರುವ ಪ್ರದೇಶಗಳಿಗೆ ಹಗಲು ವೇಳೆ ಆಗಮಿಸಿ, ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ರಾತ್ರಿ ಕಾರು ಮತ್ತು ಟ್ರಕ್‌ಗಳಲ್ಲಾಗಿ ಅಲ್ಲಿಗೆ ಬಂದು ೧೫ ನಿಮಿಷದೊಳಗಾಗಿ ದರೋಡೆ ನಡೆಸಿ ಹಣವನ್ನು ಟ್ರಕ್‌ನಲ್ಲಿದ್ದವರ ಕೈಗೆ ಹಸ್ತಾಂತರಿಸಿದ ಬಳಿಕ ಭಿನ್ನ ದಾರಿಗಳ ಮೂಲಕ ಪರಾರಿಯಾಗುವುದು ಈ ತಂಡದ ರೀತಿಯಾಗಿದೆ. ಎಟಿಎಂನ್ನು ಒಡೆಯಲು ಅತ್ಯಾಧುನಿಕ ಉಪಕರ ಣಗಳನ್ನು ದರೋಡೆಕೋರರು ಬಳಸುತ್ತಿದ್ದಾರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡವಿ ರುವ ಶಂಕೆ ಉಂಟಾಗಿರುವ ಹಿನ್ನೆಲೆ ಯಲ್ಲಿ ಪೊಲೀಸರು ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

NO COMMENTS

LEAVE A REPLY