ಸೀತಾಂಗೋಳಿಯಲ್ಲಿ ಯುವಕನಿಗೆ ತಂಡದಿಂದ ಆಕ್ರಮಣ: ತಂಡಗಳ ಸಂಘರ್ಷಾವಸ್ಥೆ ತಪ್ಪಿಸಿದ ಪೊಲೀಸ್

0
28

ಸೀತಾಂಗೋಳಿ: ಇಲ್ಲಿನ ಪೇಟೆಯಲ್ಲಿ ನಿನ್ನೆ ಸಂಜೆ ಯುವಕನಿಗೆ ತಂಡವೊಂದು ಆಕ್ರಮಣ ನಡೆಸಿದೆ. ಕುದ್ರೆಪ್ಪಾಡಿ ನಿವಾಸಿ ಮಹೇಶ್ (೨೫)ಗೆ ಆಕ್ರಮಣ ನಡೆದಿದ್ದು, ಗಾಯಗೊಂಡ ಇವರು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ನಿನ್ನೆ ಸಂಜೆ ಆಹಾರ ಸೇವಿಸಲೆಂದು  ಹೋಟೆಲ್‌ಗೆ ತೆರಳುತ್ತಿದ್ದಾಗ ಆರು ಮಂದಿ ತಂಡ ತಡೆದು ನಿಲ್ಲಿಸಿ ಸೋಡಾಬಾಟ್ಲಿ ಮೊದಲಾದವುಗಳಿಂದ ಆಕ್ರಮಿಸಿರು ವುದಾಗಿ ಮಹೇಶ್ ದೂರಿದ್ದಾರೆ. ಇದರಂತೆ ಆರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದು  ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಇದೇ ವೇಳೆ ಮಹೇಶ್‌ಗೆ ತಂಡ ಆಕ್ರಮಣಗೈದ ವಿಷಯ ತಿಳಿಯುತ್ತಿ ದ್ದಂತೆ ಎರಡು ತಂಡಗಳು ಸೀತಾಂಗೋಳಿ ಪೇಟೆಯಲ್ಲಿ ಸೇರಿದ್ದು, ಸಂಘರ್ಷ ವಾತಾವರಣ ಸೃಷ್ಟಿಯಾಗಿ ತ್ತು. ವಿಷಯ ತಿಳಿದು ಕುಂಬಳೆ ಇನ್‌ಸ್ಪೆಕ್ಟರ್ ಕೆ. ಪ್ರೇಮ್‌ಸದನ್, ಎಸ್.ಐ. ಟಿ.ವಿ ಅಶೋ ಕನ್ ತಕ್ಷಣ ತಲುಪಿ ತಂಡಗಳನ್ನು ಚದುರಿಸಿದರು. ಇದರಿಂದ ಭೀತಿಯ ವಾತಾವರಣ ದೂರ ಸರಿಯಿತು.

NO COMMENTS

LEAVE A REPLY