ತೋಟಕ್ಕೆ ತೆರಳಿದ್ದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
21

ಬದಿಯಡ್ಕ: ತೋಟಕ್ಕೆ ತೆರಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾಗಿರಿ ಮಾವಿನಮೂಲೆ ನಿವಾಸಿ ಕೃಷ್ಣ ಮಣಿಯಾಣಿ(೭೨) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ನಿನ್ನೆ ಸಂಜೆ ಮನೆ ಸಮೀಪದಲ್ಲಿರುವ ತೋಟಕ್ಕೆಂದು ತೆರಳಿದ್ದರು. ಆದರೆ ಬಳಿಕ ಅವರು ಮರಳಿ ಬಾರದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಅಳಿಯ ಬಾಲಕೃಷ್ಣ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಪೊಲೀಸರು ಹಾಗೂ ನಾಗರಿಕರು ಶೋಧ ನಡೆಸುತ್ತಿದ್ದಾಗ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.  ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಅಂ ದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಲಕ್ಷ್ಮಿ,  ಪ್ರೇಮಕುಮಾರಿ, ಶಶಿಕಲಾ, ಚಂದ್ರಾವತಿ, ಅಳಿಯಂದಿರಾದ ಭಾಸ್ಕರ, ಬಾಲಕೃಷ್ಣ ಸಾರಡ್ಕ, ರಾಜೇಶ್, ಬಾಲಕೃಷ್ಣ, ಸಹೋದರ-ಸಹೋ ದರಿಯರಾದ ಕುಂಞಿರಾಮ, ಪೊನ್ನಕ್ಕು, ಮುತ್ತಕ್ಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY