ನಾಪತ್ತೆಯಾದ ಯುವತಿ ಮದುವೆಯಾಗಿ ಪತ್ತೆ

0
24

ಕಾಸರಗೋಡು: ನಾಪತ್ತೆಯಾಗಿದ್ದ ಯುವತಿ ಪ್ರಿಯತಮನನ್ನು ಮದುವೆ ಯಾಗಿ ಹಿಂತಿರುಗಿದ ಘಟನೆ ಹೊಸ ದುರ್ಗದಲ್ಲಿ ನಡೆದಿದೆ. ಹೊಸ ದುರ್ಗ ಅಜಾನೂರು ಕಡಪ್ಪುರದ ಇಂದಿರಾ ಎಂಬವರ ಪುತ್ರಿ ರಾಗಿ(೧೮) ಮೊನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದವಳು ಬೆಳಿಗ್ಗೆ ನಾಪತ್ತೆಯಾಗಿದ್ದಳು. ಆ ಬಗ್ಗೆ ತಾಯಿ ನೀಡಿದ ದೂರಿನಂತೆ ಹೊಸ ದುರ್ಗ ಪೊಲೀಸರು  ಪ್ರಕರಣ ದಾಖ ಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ರಾಗಿ ನಿನ್ನೆ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ತಾನು ಪಯ್ಯನ್ನೂ ರಿನ ವಿವಿನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯನ್ನು ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನಂತರ ರಾಗಿಯ ಇಷ್ಟಪ್ರಕಾರ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.

NO COMMENTS

LEAVE A REPLY