ಬಸ್-ಬೈಕ್ ಢಿಕ್ಕಿ:ಸವಾರ ಜಖಂ

0
18

ಕಾಸರಗೋಡು: ಚೆರ್ಕಳ ತಿರುವಿನಲ್ಲಿ ಬೈಕ್ ಮತ್ತು ಬಸ್ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಕಾಸರಗೋಡು-ಬಂದಡ್ಕ ರೂಟ್‌ನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ತೆಕ್ಕಿಲ್ ಫೆರಿ ಬಾಡೂರು ಹೌಸ್‌ನ ಮೊಹಮ್ಮದ ರಿಫ್ಸಲ್ ಟಿ.ಬಿ.(೩೩) ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಬಸ್ ಚಾಲಕನ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನ್ ೯ರಂದು ಈ ಘಟನೆ ನಡೆದಿದೆ.

NO COMMENTS

LEAVE A REPLY