ನಾಪತ್ತೆಯಾದ ವಿದ್ಯಾರ್ಥಿನಿ ಮದುವೆಯಾಗಿ ವಾಪಾಸು

0
36

ಕಾಸರಗೋಡು: ನಾಪತ್ತೆಯಾದ ಕಂಪ್ಯೂಟರ್ ವಿದ್ಯಾರ್ಥಿನಿ ಮದುವೆ ಯಾಗಿ ಹಿಂತಿರುಗಿದ ಘಟನೆ ನಡೆದಿದೆ. ಚೆರ್ಕಳ ವಿ.ಕೆ.ಪಾರದ ಭಾಸ್ಕರನ್ ಎಂಬವರ ಪುತ್ರಿಯೂ ಕಂಪ್ಯೂಟರ್ ವಿದ್ಯಾರ್ಥಿನಿ ಆದಿರಾ(೧೮) ನಿನ್ನೆ ಬೆಳಿಗ್ಗೆ ೯ ಗಂಟೆಯಿಂದ ನಾಪತ್ತೆಯಾ ಗಿರುವುದಾಗಿ ಆಕೆಯ ಸಹೋದರ ಅಭಿಲಾಷ್ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ರುವಂತೆಯೇ ಆದಿರಾ ನಿನ್ನೆ ಸಂಜೆಯೇ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ತಾನು ಕೋಳಿಯಡ್ಕದ ಅಶೋಕನ್ ಎಂಬಾತನನ್ನು ಮದುವೆಯಾಗಿರು ವುದಾಗಿ ಆಕೆ ಪೊಲೀಸರಲ್ಲಿ ತಿಳಿಸಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪ ಡಿಸಿದ್ದಾರೆ.  ನ್ಯಾಯಾಲಯ ಆಕೆಯ ಇಷ್ಟಪ್ರಕಾರ ತೆರಳಲು ಅನುಮತಿ ನೀಡಿದೆ.  ಅದರಂತೆ ಆಕೆ ಪತಿ ಜತೆ ತೆರಳಿದ್ದಾಳೆ.

NO COMMENTS

LEAVE A REPLY