ರೈಲಿನಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹ: ತನಿಖೆ ನಾಲ್ಕು ರಾಜ್ಯಗಳಿಗೆ ವಿಸ್ತರಣೆ

0
19

ಕಾಸರಗೋಡು: ರಾಜಸ್ಥಾನದಿಂದ ಎರ್ನಾಕುಳಂಗೆ  ತೆರಳುತ್ತಿದ್ದ ಮರುಸಾ ಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊನ್ನೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಗುರುತುಹಚ್ಚಲು ಈತನಕ ಸಾಧ್ಯವಾಗಿಲ್ಲ.

ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಕಾಸರಗೋಡು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಕುರಿತಾದ ಮಾಹಿತಿ ಸಂಗ್ರಹಿಸಲು   ರಾಜಸ್ಥಾನ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕಕ್ಕೂ ತನಿಖೆ ವಿಸ್ತರಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಈ ಕುರಿತಾದ ಮಾಹಿತಿ ಯನ್ನು ನಾಲ್ಕು ರಾಜ್ಯಗಳ ಎಲ್ಲಾ ಪೊಲೀ ಸ್ ಅಧಿಕಾರಿಗಳಿಗೂ ಕಳುಹಿಸಿಕೊಡ ಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮರುಸಾಗರ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯ ಶೌಚಾಲಯ ಬದಿಯಲ್ಲಿ ಮೊನ್ನೆ ಮುಂಜಾನೆ ಸುಮಾರು ೪೦ ವರ್ಷ ತೋರುವ ಯುವಕನ ಮೃತದೇಹ ಕಾಸರಗೋಡು ರೈಲ್ವೇ ಪೊಲೀಸರು ಪತ್ತೆಹಚ್ಚಿದ್ದರು. ಮೃತದೇಹ ಪತ್ತೆಯಾಗುವ ೧೫ ತಾಸುಗಳ ಹಿಂ ದೆಯೇ ಆ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದರು.

NO COMMENTS

LEAVE A REPLY