ವಾಹನ ಖರೀದಿಗೆ ಬ್ಯಾಂಕ್ನಿಂದ ಸಾಲ ಪಡೆದು ವಂಚನೆ: ಕೇಸು ದಾಖಲು

0
27

ಮುಳ್ಳೇರಿಯ: ವಾಹನ ಖರೀದಿಸ ಲೆಂದು ಬ್ಯಾಂಕ್‌ನಿಂದ ಸಾಲ ಪಡೆದು ಬಳಿಕ ವಾಹನ ಖರೀದಿಸಿಲ್ಲ. ಅಲ್ಲದೆ ಬ್ಯಾಂಕ್‌ಗೆ ಸಾಲವನ್ನೂ ಮರು ಪಾವತಿಸದೆ ವಂಚಿಸಲಾಯಿತೆಂಬ ಆರೋಪದಂತೆ ನ್ಯಾಯಾಲಯದ ಆದೇಶ ಪ್ರಕಾರ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿ ಯಾದ ಪೊವ್ವಲ್ ಶಾಖೆ ಮೆನೇಜರ್ ನೀಡಿದ ದೂರಿನಂತೆ ಕೇಸು ದಾಖಲಿಸ ಲಾಗಿದೆ. ಅರುಣ್ ಕುಮಾರ್ ಉಳ್ಳಾಲ, ಚೇತನ್ ಶೆಟ್ಟಿ ಕೊಯಿಪ್ಪಾಡಿ, ವೇಗ ಟಿವಿಎಸ್ ಏಜೆನ್ಸಿ ವಿದ್ಯಾನಗರ, ಟಿವಿಎಸ್ ಮೋಟಾರ್ಸ್ ಕೃಷ್ಣಗಿರಿ ತಮಿಳುನಾ ಡು, ಟಿವಿಎಸ್ ಮೋಟಾರ್ಸ್ ತೋಟಡ, ಕೇರಳ ಎಂಬಿವುಗಳ ವಿರುದ್ಧ ಕೇಸು ದಾಖಲಿಸಲಾಗಿದೆ.

ಅರುಣ್ ಕುಮಾರ್ ಉಳ್ಳಾಲ ಅವರಿಗೆ ಆಟೋರಿಕ್ಷಾ ಖರೀದಿಸಲೆಂದು ಬ್ಯಾಂಕ್‌ನಿಂದ ೨೦೧೭ ಜುಲೈ ೨೧ರಂದು ೧.೬೦ ಲಕ್ಷ ರೂ. ಸಾಲ ಮಂಜೂರು ಮಾಡಲಾಗಿತ್ತು. ಸಾಲ ಲಭಿಸಲು ಚೇತನ್ ಶೆಟ್ಟಿ ಕೊಯಿಪ್ಪಾಡಿ ಮಧ್ಯವರ್ತಿಯಾಗಿ ದ್ದರು. ಇದರಂತೆ ೧.೦೪ ಲಕ್ಷ ರೂ.ಗಳ ಚೆಕ್ ಬ್ಯಾಂಕ್‌ನಿಂದ ವಾಹನ ಏಜೆನ್ಸಿಗೆ ನೀಡಲಾಗಿತ್ತು. ಆದರೆ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ  ೨೦೧೮ ಜನವರಿ ೧೯ರಂದು ಬ್ಯಾಂಕ್‌ನಿಂದ  ನೋಟೀಸು ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆಯಿಲ್ಲ. ಇದರಿಂದ ಪರಿಶೀಲಿಸಿದಾಗ ಸಾಲ ಪಡೆದ ವ್ಯಕ್ತಿ ಆಟೋರಿಕ್ಷಾ ಖರೀದಿಸಿಲ್ಲವೆಂಬ ವಿಷಯ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪೊವ್ವಲ್ ಶಾಖೆ ಮೆನೇಜರ್ ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿತ್ತು. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY