ಸ್ನೇಹಿತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಮರಳುತ್ತಿದ್ದ ಯುವಕನಿಗೆ ಆಕ್ರಮಿಸಿ ಹಣ, ಮೊಬೈಲ್ ದರೋಡೆ

0
35

ಕಾಸರಗೋಡು: ಅಸೌಖ್ಯಪೀಡಿತ ಸ್ನೇಹಿತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಕಾರಿನಲ್ಲಿ ಮರಳುತ್ತಿದ್ದ ಯುವಕನನ್ನು ತಲಪಾಡಿಯಲ್ಲಿ ತಂಡವೊಂದು ತಡೆದು ನಿಲ್ಲಿಸಿ ಆಕ್ರಮಿಸಿ ಹಣ ಹಾಗೂ ಮೊಬೈಲ್ ದರೋಡೆ ಗೈದಿದೆ. ಘಟನೆ ಬಗ್ಗೆ ಯುವಕ ಕಣ್ಣೂರು ನಗರಠಾಣೆಯಲ್ಲಿ ದೂರು ನೀಡಿದ್ದು, ಆದರೆ ಘಟನೆ ನಡೆದಿರುವುದು ಕಾಸರ ಗೋಡು ಜಿಲ್ಲೆಯಲ್ಲಾದುದರಿಂದ ಪ್ರಕ ರಣವನ್ನು ಇಲ್ಲಿಗೆ ಹಸ್ತಾಂತರಿಸಲಾಗಿದೆ.

ಕಣ್ಣೂರು ಥಾಣ ನಿವಾಸಿ ಟಿ. ಆಸಿಂ (೩೭) ಎಂಬವರು ಆಕ್ರಮಣ ಹಾಗೂ ದರೋಡೆಗೀಡಾದ ವ್ಯಕ್ತಿಯಾಗಿ ದ್ದಾರೆ.  ಇವರ ಸ್ನೇಹಿತ ಬಾಬು ಎಂಬವರಿಗೆ ಮೊನ್ನೆ ರಾತ್ರಿ ತೀವ್ರ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದ ರಿಂದ ಅವರನ್ನು ಕಾರಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ಅಲ್ಲಿ ದಾಖಲಿಸಿದ ಬಳಿಕ ನಿನ್ನೆ ಮುಂಜಾನೆ ವೇಳೆ ಆಸಿಂ ಕಾರಿನಲ್ಲಿ ಮರಳಿದ್ದಾರೆ. ಕಾರಿನಲ್ಲಿ ಇವರು ಏಕಾಂಗಿಯಾಗಿದ್ದರು. ಮುಂಜಾನೆ ೩.೩೦ರ ವೇಳೆ ಕಾರು ತಲಪ್ಪಾಡಿ ತಲುಪಿದಾಗ ಬೈಕ್‌ಗಳಲ್ಲಿ ತಂಡವೊಂದು ಹಿಂಬಾಲಿಸಿದೆ. ತಲಪ್ಪಾಡಿಯಿಂದ ಅಲ್ಪ ಮುಂದೆ ಸಾಗಿದೊಡನೆ ಬೈಕ್‌ಗಳನ್ನು ಕಾರಿಗೆ ಅಡ್ಡ ನಿಲ್ಲಿಸಿದ ತಂಡ ಆಸಿಂರಿಂದ ಹಣ ಕೇಳಿದೆ. ಆದರೆ ಕೈಯಲ್ಲಿ ಹಣವಿಲ್ಲವೆಂದು ಆಸಿಂ ತಿಳಿಸಿದಾಗ ತಂಡ ಅವರ ತಲೆಗೆ ಕಲ್ಲಿನಿಂದ ಹೊಡೆದಿದೆ. ಬಳಿಕ ಅವರಿಂದ  ಬಲವಂತವಾಗಿ ಎಟಿಎಂ ಕಾರ್ಡ್ ಪಡೆದು ಸಮೀಪದ ಎಟಿಎಂ ಕೌಂಟರ್‌ಗೆ ತೆರಳಿ ೫೦೦೦ ರೂಪಾಯಿ ಹಿಂಪಡೆದಿದೆ. ಬಳಿಕ  ಆಸಿಂರ ೧೫,೦೦೦ ರೂ. ಮೌಲ್ಯದ ಮೊಬೈಲ್ ಪೋನ್ ಕೂಡಾ ಪಡೆದು ಬೈಕ್‌ಗಳಲ್ಲಿ ಪರಾರಿಯಾಗಿದೆ. ತಂಡದ ಆಕ್ರಮಣದಿಂದ ಗಾಯಗೊಂಡ ಆಸಿಂ ಕಣ್ಣೂರು ಜಿಲ್ಲಾಸ್ಪತ್ರೆಗೆ ತೆರಳಿ  ಚಿಕಿತ್ಸೆ ಪಡೆದ ಬಳಿಕ ಕಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದಿರುವುದು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಇತ್ತ ಹಸ್ತಾಂತರಿಸಲಾಗಿದೆ. ಇದರಂತೆ ಇಲ್ಲಿನ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY