ನೀರಿನ ಸೆಳೆತಕ್ಕೆ ಸಿಲುಕಿ ಕೃಷಿಕ ಮೃತ್ಯು

0
24

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಎgಡು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ ಪ್ರಾಕೃತಿಕ ದುರಂತ ಇನ್ನು ಮುಂದುವರಿಯುತ್ತಿದ್ದು, ನಿನ್ನೆ ಇನ್ನೋರ್ವನನ್ನು ಬಲಿತೆಗೆದಿದೆ. ಮಧೂರು ಪಟ್ಲದ ಕೃಷಿಕ ಎನ್. ಬಡುವನ್ ಕುಂಞಿ (೫೩) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೆಲ್  ಕಂಪೆನಿ ಬಳಿಯ ಉಡುವದ ಅಣೆಕಟ್ಟಿನ ನೀರಿನಲ್ಲಿ ನಿನ್ನೆ ಸಂಜೆ ಬಡುವನ್ ಕುಂಞಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದ ಕಾಸರಗೋಡು ಅಗ್ನಿಶಾಮಕದಳ  ಅತ್ತ ಸಾಗುವಷ್ಟರಲ್ಲಿ ಅಲ್ಲಿ ಸ್ನಾನ ಮಾಡು ತ್ತಿದ್ದವರು ಮೃತದೇಹವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮಧೂರು ಉಡುವ ಮೀರಾನ್ ಮೂಸಾ ಎಂಬವರ ಪುತ್ರ ಹಾಗೂ ಕೃಷಿಕನಾದ ಬಡುವನ್ ಕುಂಞಿ ನಿನ್ನೆ ಅಲ್ಲೇ ಪಕ್ಕದಲ್ಲಿರುವ ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದರು. ಆ ವೇಳೆ  ಪಕ್ಕದ ಹೊಳೆನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಯವರು ಹಾಗೂ ಊರವರು ಹುಡುಕಾಟದಲ್ಲಿ ತೊಡಗಿದ್ದು   ಸಂಜೆ  ಅಣೆಕಟ್ಟಿನಲ್ಲಿ ಮೃತದೇಹ  ಪತ್ತೆಯಾಗಿದೆ.

ಮೃತರು ಪತ್ನಿ ಖದೀಜ, ಪುತ್ರ ಸಾಬೀರ್, ಸೊಸೆ ಮುಮ್ತಾಸ್, ಸಹೋದರರಾದ ಅಬ್ದುಲ್ಲ, ಅಬ್ದುಲ್ ಖಾದರ್, ಸಹೋದರಿ ಖದೀಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಳೆಗಾಲ ಆರಂಭಗೊಂಡ ಬಳಿಕ ಜಿಲ್ಲೆಯಲ್ಲಿ ಪ್ರಾಕೃತಿಕ ದುರಂತಕ್ಕೆ ಅಡೂರು ಚರ್ಲಕೈಯ ಚನಿಯ ನಾಯ್ಕ (೬೫) ಗಾಳಿಮುಖ ಬಳಿಯ ಪಯಸ್ವಿನಿ ಹೊಳೆಯ ನೀರಿನ ಸೆಳೆ ತಕ್ಕೆ ಸಿಲುಕಿ  ಮತ್ತು ಹೊಸದುರ್ಗ ಕುಶಾಲನಗರದ ಫಾತಿಮ ಕ್ವಾರ್ಟ ರ್ಸ್‌ನ ಫಾತಿಮತ್ ಸೈನಬಾ (೪) ಮನೆ ಪಕ್ಕದ ಹೊಳೆ ನೀರಿನ ಹೊಂ ಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದ ರಿಂದ ಪ್ರಾಕೃತಿಕ ವಿಕೋಪಕ್ಕೆ ಬಲಿ ಯಾದವರ ಸಂಖ್ಯೆ ಮೂರಕ್ಕೇರಿದೆ.

NO COMMENTS

LEAVE A REPLY