ಶಾಲಾ ವಿದ್ಯಾರ್ಥಿಯನ್ನು ಸುತ್ತಾಡಲು ಕರೆದೊಯ್ದ ಯುವಕ ಸೆರೆ

0
39

ಕಾಸರಗೋಡು: ಶಾಲೆಗೆ ಹೋದ ಎಂಟನೇ ತರಗತಿಯ  ವಿದ್ಯಾರ್ಥಿನಿಯನ್ನು ತಿರುಗಾಡಲು ಕರೆದೊಯ್ದ ದೂರಿನಂತೆ ಯುವಕ ನೋರ್ವನ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಶಾಲೆ ಯೊಂದರ ವಿದ್ಯಾರ್ಥಿನಿಯೋರ್ವೆ ನಿನ್ನೆ ಬೆಳಿಗ್ಗೆ ಶಾಲೆಗೆಂದು ಹೇಳಿ ತೆರಳಿದ್ದಳು. ಆದರೆ ಆಕೆ ಶಾಲೆಗೆ ತಲುಪಿರಲಿಲ್ಲ. ಶಾಲೆ ಬಳಿ ಆಕೆ ಪರಿಚಯ ಹೊಂದಿದ್ದ ಚೆರ್ಕಳದ ೧೯ ವರ್ಷದ ಯುವಕನೋರ್ವ ಆಕೆಯನ್ನು ಪುಸಲಾಯಿಸಿ ಸುತ್ತಾಡಲು ಕರೆದೊಯ್ದಿದ್ದನು. ಶಾಲೆಗೆ ಹೋದ ಪುತ್ರಿ ಹಿಂತಿರುಗದಾಗ ಆಕೆಯ ತಾಯಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಳು. ಸಂಜೆ  ಯುವಕ ಬಾಲಕಿಯನ್ನು ಮತ್ತೆ ಊರಿಗೆ ತಲುಪಿಸಿ ಜಾಗ ಖಾಲಿ ಮಾಡಿದ್ದನು. ತಾಯಿ ಪ್ರಶ್ನಿಸಿದಾಗ ನಡೆದ ವಿಷಯ ಆಕೆ ತಿಳಿಸಿದ್ದಾಳೆ. ಬಳಿಕ ಆಕೆ ನೀಡಿದ ದೂರಿನಂತೆ ಬಲವಂತವಾಗಿ ತಿರುಗಾ ಡಲು ಕರೆದೊಯ್ದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖ ಲಿಸಿ ಆತನನ್ನು ಸೆರೆ ಹಿಡಿದಿದ್ದಾರೆ.

NO COMMENTS

LEAVE A REPLY