ಕ್ಷೌರಿಕನಿಗೆ ಆಕ್ರಮಣ: ಆರೋಪಿಗಳಿಗಾಗಿ ಶೋಧ; ಎರಡು ವಾಹನ ವಶ

0
38

ಕುಂಬಳೆ: ಉಪ್ಪಳ ನಯಾ ಬಜಾರ್ ಅಂಬಾರಿನಲ್ಲಿ ಕ್ಷೌರಿಕ ಮೊಯ್ದೀನ್ ಬಾತಿಷ (೩೧)ರಿಗೆ ಆಕ್ರಮಿಸಿದ ಪ್ರಕರಣದಲ್ಲಿ ಆರೋಪಿಗಳಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಗಾಯಾಳುವಿನ ದೂರಿನಂತೆ ನೌಮಾನ್, ಬಾತ್ತಿ, ಇನಾಫ್ ಎಂಬಿವರ ವಿರುದ್ಧ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿದ್ದಾರೆ. ಈ ಮೂವರು ನಿನ್ನೆ ರಾತ್ರಿ ಕೈಕಂಬದಲ್ಲಿರುವುದಾಗಿ ತಿಳಿದು ಕುಂಬಳೆ ಸಿಐ ಕೆ. ಪ್ರೇಮ್ ಸದನ್, ಅಡಿಶನಲ್ ಎಸ್‌ಐ ಶಿವದಾಸನ್ ನೇತೃತ್ವದಲ್ಲಿ ಅಲ್ಲಿಗೆ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡೊಡನೆ ಈ ಮೂವರು ಅಲ್ಲಿಂದ ಪರಾರಿಯಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಆರೋ ಪಿಗಳು ಪರಾರಿ ವೇಳೆ ಉಪೇಕ್ಷಿಸಿದ ಬೈಕ್ ಹಾಗೂ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ.

ಮೊನ್ನೆ ಸಂಜೆ ತಂಡವೊಂದು ಮೊಯ್ದೀನ್ ಬಾತಿಷರ ಕ್ಷೌರದಂ ಗಡಿಗೆ ತಲುಪಿ ಆಕ್ರಮಣ ನಡೆಸಿತ್ತು. ಇದರಿಂದ ಕ್ಷೌರದಂಗಡಿಗೂ ಹಾನಿಯುಂಟಾಗಿದೆ.  ಗಾಯಗೊಂಡ ಮೊಯ್ದೀನ್ ಬಾತಿಷ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರಕ್ಷೌರದಂಗಡಿ ಮುಂದೆ ತಂಡ ನಡೆಸುತ್ತಿದ್ದ ಗಾಂಜಾ ಮಾರಾಟವನ್ನು  ವಿರೋಧಿಸಿದ ದ್ವೇಷವೇ ಆಕ್ರಮಣಕ್ಕೆ ಕಾರಣವೆಂದು ಮೊಯ್ದೀನ್ ಬಾತಿಷ ಆರೋಪಿಸಿದ್ದಾರೆ.

NO COMMENTS

LEAVE A REPLY