೧೧ ಕೋಟಿ ರೂ.ಗಳ ವಿದೇಶ ಕರೆನ್ಸಿ ವಶ: ಅಫ್ಘಾನ್ ಪ್ರಜೆ ಕಸ್ಟಡಿಗೆ

0
31

ಕೊಚ್ಚಿ: ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ೧೧ ಕೋಟಿ ರೂ.ಗಳ ವಿದೇಶ ಕರೆನ್ಸಿ ವಶಪಡಿ ಸಲಾಗಿದೆ. ಘಟನೆಗೆ ಸಂಬಂಧಿಸಿ ಅಫ್ಘಾನ್ ಪ್ರಜೆ ಯಾದ ಯೂಸಫ್ ಮುಹಮ್ಮದ್ ಸಿದ್ಧಿಕ್(೩೮) ಎಂಬಾತನನ್ನು ಕಸ್ಟಡಿಗೆ ತೆಗೆಯಲಾಗಿ ದೆ. ಇಂದು ಬೆಳಿಗ್ಗೆ ನಡೆಸಿದ ಶೋಧ ವೇಳೆ ಕರೆನ್ಸಿ ಪತ್ತೆಹಚ್ಚಲಾಗಿದೆ.

ನೆಡುಂಬಾಶೇರಿಯಿಂದ ನಿನ್ನೆ ಪ್ರಯಾಣ ಹೊರಡಬೇಕಾಗಿದ್ದ  ವಿಮಾನದಲ್ಲಿ ಪ್ರಯಾಣಿಸಲು ಅಫ್ಘಾನ್ ಪ್ರಜೆ ದೆಹಲಿಯಿಂದ ತಲುಪಿ ದ್ದಾನೆ.  ಆದರೆ ತಾಂತ್ರಿಕ ಕಾರಣಗಳಿಂ ದಾಗಿ ವಿಮಾನದ ಪ್ರಯಾಣ ನಿನ್ನೆ ಮೊಟಕುಗೊಂಡಿದ್ದು, ಇದರಿಂದ ಪ್ರಯಾಣಿಕರಿಗೆ ಹೋಟೆಲ್‌ಗಳಲ್ಲಿ ವಾಸಸೌಕರ್ಯ ಏರ್ಪಡಿಸಲಾಗಿತ್ತು. ಇಂದು ಬೆಳಿಗ್ಗೆ ಹೊರಟ ಎಮಿರೇಟ್ಸ್ ವಿಮಾನದಲ್ಲಿ ಇವರನ್ನು ಕಳುಹಿಸುವ ಮುಂಚಿತವಾಗಿ ತಪಾಸಣೆ ನಡೆಸಿದಾಗ ಕರೆನ್ಸಿ ಪತ್ತೆಯಾಗಿದೆ. ಯು.ಎಸ್. ಡಾಲರ್ ಹಾಗೂ ಸೌದಿಯ ರಿಯಾಲ್ ವಶಪಡಿಸಲಾಗಿದೆ. ಬಂಧಿತ ವ್ಯಕ್ತಿ ಇದನ್ನು ದೆಹಲಿಯಿಂದ ತಂದಿದ್ದು ದುಬಾ ಗೆ ಕೊಂಡೊಯ್ಯು ತ್ತಿದ್ದ ನೆನ್ನಲಾಗಿದೆ.  ಇಷ್ಟು ಮೊತ್ತದ ವಿದೇಶ ಕರೆನ್ಸಿ ದೇಶದಲ್ಲಿ ವಶಪಡಿ ಸಿಕೊಂಡಿರುವುದು ಇದೇ ಮೊದಲು.

NO COMMENTS

LEAVE A REPLY