ಬಿಜೆಪಿಯಿಂದ ತುರ್ತು ಪರಿಸ್ಥಿತಿ ವಿರೋಧಿ ದಿನಾಚರಣೆ

0
23

ಕಾಸರಗೋಡು: ಕೇರಳದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಗೆ ಸಮಾನ ವಾದ ಸ್ಥಿತಿ ಇಂದು ಸಂಜಾತವಾಗಿದೆ ಎಂದು ಬಿಜೆಪಿ ಉತ್ತರ ವಲಯ ಅಧ್ಯಕ್ಷ ವಿ.ವಿ. ರಾಜನ್ ಆರೋಪಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರ ಗೋಡು ಮುನಿಸಿಫಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ ನಡೆದ ತುರ್ತು ಪರಿಸ್ಥಿತಿ ವಿರೋಧಿ ದಿನಾಚರಣೆಯಂ ಗವಾಗಿ ನಡೆಸಲಾದ ಪ್ರಜಾತಂತ್ರ ಸಂರಕ್ಷಣಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದಿರಾಗಾಂಧಿಯವರು ತಮ್ಮ ಸ್ವಂತ ಅಧಿಕಾರ  ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿ ದೇಶದ ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿದುಕೊಂಡರು. ಸುದ್ದಿ ಮಾಧ್ಯಮ ಸ್ವಾತಂತ್ರ್ಯವನ್ನು ಇಲ್ಲದಾಗಿಸಿ ಅವುಗಳ ಮೇಲೆ ಸೆನ್ಸಾರ್ ಹೇರಿದರು  ಪೊಲೀಸರು ದಾಂಧಲೆ ನಡೆಸಿದರು. ವಿಪಕ್ಷ ನೇತಾರರನ್ನೆಲ್ಲಾ ಜೈಲಿಗಟ್ಟಿದರು. ಅದೇ ರೀತಿ ಇಂದು ಪಿಣ ರಾಯಿ ನೇತೃತ್ವದ ಸರಕಾರವೂ ಕಾರ್ಯ ವೆಸಗುತ್ತಿದೆ. ಪೊಲೀಸರು ನಿರಪರಾಧಿಗಳನ್ನು ಬೇಟೆಯಾಡುತ್ತಿದ್ದಾರೆ. ಪೊಲೀಸ್ ಕಸ್ಟಡಿ ಸಾವು, ಕೊಲೆ ಇತ್ಯಾದಿಗಳು ಇಂದು ಒಂದು ನಿತ್ಯ ಘಟನೆಯಾಗಿ ಮಾರ್ಪಟ್ಟಿದೆ. ಪೊಲೀಸ್ ಕಸ್ಟಡಿ ಸಾವಿಗೆ ಕಾರಣರಾದ ಪೊಲೀಸ್ ಕ್ರಿಮಿನಲ್‌ಗಳನ್ನು ನ್ಯಾಯೀ ಕರಿಸಿ ಸಂರಕ್ಷಿಸಲಾಗುತ್ತಿದೆ. ಪೊಲೀಸ್ ಪಡೆಯನ್ನು ಕೆಂಪು ಪಡೆಯನ್ನಾಗಿ ಬದಲಾಯಿಸಲಾಗಿದೆ. ಪೊಲೀಸ್ ಅಸೋಸಿಯೇಶನ್ ಸಮ್ಮೇಳನಗಳಲ್ಲಿ ನಿಬಂಧನೆಗಳಿಗೆ ತದ್ದಿರುದ್ದವಾಗಿ ಹುತಾತ್ಮ ಮಂಟಪಗಳನ್ನು ನಿರ್ಮಿಸಿ ಘೋಷಣೆಗಳನ್ನು ಮೊಳಗಿಸಲಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನಿರ್ದೇಶದಂತೆ ಇದನ್ನು ನಡೆಸಲಾಗುತ್ತಿದೆ ಎಂದು ರಾಜನ್ ಅಭಿಪ್ರಾಯಪಟ್ಟರು.

ಪಿಣರಾಯಿಯವರ ವಿರುದ್ಧ ಸುದ್ದಿ ಪ್ರಕಟಿಸುವ ಸುದ್ದಿಮಾಧ್ಯಮದ ವರನ್ನು ಬೆದರಿಸಿ ವಿರೋಧಿಗಳ ಶಬ್ದ ಇಲ್ಲದಾಗಿ ಸಲು ಎಡರಂಗ ಸರಕಾರ ಯತ್ನಿಸುತ್ತಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿ ಪ್ರಜಾತಂತ್ರದ ಕೊಲೆ ನಡೆಸಿದ್ದಾರೆ. ಸ್ವಂತ ಸಚಿವ ಸಂಪುಟದ ಸಚಿವರುಗಳಿಗೂ ಯಾವುದೇ ಅಧಿಕಾರ ಇಲ್ಲವಾಗಿತ್ತು. ಅದೇ ರೀತಿ ಇಂದು ಪಿಣ ರಾಯಿ ವಿಜಯನ್ ನೇತೃತ್ವದ ಸರಕಾ ರದಲ್ಲಿ ಎಲ್ಲಾ ರಾಜ್ಯ ಸಚಿವರುಗಳನ್ನು ಕೇವಲ ಒಂದು ನೋಟದ ವಸ್ತುಗಳನ್ನಾಗಿಸಲಾಗಿದೆ. ಸ್ವಂತ ಖಾತೆಯಲ್ಲಿ ನಡೆಯುತ್ತಿರುವ ವರ್ಗಾವಣೆ ಬಗ್ಗೆಯೂ ಸಚಿವರುಗಳಿಗೆ ತಿಳಿಯುತ್ತಿಲ್ಲ. ಸಚಿವರುಗಳ ಮೇಲೆ ಪಿಣರಾಯಿಯವರು ನಂಬುಗೆ ಹೊಂದಿಲ್ಲ. ಅದಕ್ಕಾಗಿ ಅವರು ಸಲಹೆಗಾರರನ್ನು ನೇಮಿಸುತ್ತಿದ್ದಾರೆ ಎಂದು ರಾಜನ್ ಆರೋಪಿಸಿದ್ದಾರೆ. “ಇಂಡಿಯಾ ಅಂದರೆ  ಇಂದಿರಾ, ಇಂದಿರಾ ಅಂದರೆ ಇಂಡಿಯಾ” ಎಂಬುವುದು ಇಂದಿರಾಗಾಂಧಿಯ ವರ ನಿಲುವು ಆಗಿತ್ತು. ಅದುವೇ ಪಿಣರಾಯಿ ನಿಲುವು ಆಗಿದೆ. ಕೇಂದ್ರ ಸರಕಾರವನ್ನು ದೂಷಿಸಿ ಆ ಮೂಲಕ ರಾಜ್ಯ ಸರಕಾರದ ಪರಾಜಯದಿಂದ ನುಣುಚಿಕೊಳ್ಳಲು ಮುಖ್ಯಮಂತ್ರಿ ಯತ್ನಿಸುತ್ತಿದ್ದಾರೆಂದೂ ರಾಜನ್ ಆರೋಪಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾ. ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇತಾರರಾದ  ಕೆ. ಸುರೇಶ್ ಕುಮಾರ್ ಶೆಟ್ಟಿ, ನೆಂಜಿಲ್ ಕುಂಞಿರಾಮನ್, ಪ್ರಮೀಳಾ ಸಿ. ನಾಯ್ಕ್, ಎ. ವೇಲಾಯುಧನ್, ವಿ. ಕುಂಞಿಕಣ್ಣನ್, ರವೀಶ ತಂತ್ರಿ ಕುಂಟಾರು, ವಿ. ಬಾಲಕೃಷ್ಣ ಶೆಟ್ಟಿ, ಎಂ. ಸಂಜೀವ ಶೆಟ್ಟಿ ಮೊದಲಾದವರು ಭಾಗವಹಿಸಿ ಮಾತನಾಡಿದರು.

NO COMMENTS

LEAVE A REPLY