ವಿದ್ಯಾರ್ಥಿಗಳ ಬೆದರಿಸಿ ಹಾಡಹಗಲೇ ದನ ಕಳವು

0
29

ಮಂಜೇಶ್ವರ: ಮೇಯಲು ಕಟ್ಟಿದ್ದ ದನಗಳೆರಡನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಮೀಂಜ ತೊಟ್ಟೆ ತ್ತೋಡಿ ವಿದ್ಯಾವರ್ಧಕ ಎಲ್.ಪಿ ಶಾಲೆಯ ಮೈದಾನ ಬಲಿ ಮೇಯಲು ಕಟ್ಟಿದ್ದ ಚಿಗುರುಪಾದೆ ನಿವಾಸಿ ಸರಸ್ವತಿ ಎಂಬವರ ದನ ಹಾಗೂ ತೊಟ್ಟೆ ತ್ತೋಡಿ ನಿವಾಸಿ ಗುರುವ ಎಂಬವರ ದನವನ್ನು ನಿನ್ನೆ ಹಾಡಹಗಲೇ ಕಳವು ನಡೆಸಲಾಗಿದೆ. ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಮಕ್ಕಳ ಕಣ್ಣೆದುರೇ ಬಂದ ಓಮ್ನಿ ವ್ಯಾನ್‌ನಿಂದ ಇಳಿದ ಮೂವರು ಹಗ್ಗ ಬಿಚ್ಚಿ ಓಮ್ನಿಗೆ ಹತ್ತಿಸಿದ್ದಾರೆ. ಇದನ್ನು ಕಂಡ ಮಕ್ಕಳು ಬೊಬ್ಬೆ ಹೊಡೆಯಲಾರಂಭಿಸಿದಾಗ ಕತ್ತಿ ತೋರಿಸಿ  ಮಕ್ಕಳನ್ನು ಬೆದರಿಸಿ ದ್ದಾರೆ. ಕತ್ತಿಯನ್ನು ಕಂಡ ಮಕ್ಕಳು ಭಯದಿಂದ ಮೌನ ವಹಿಸಿದ್ದಾರೆ. ಬಳಿಕ ಅಧ್ಯಾಪಕರಲ್ಲಿ ಮಕ್ಕಳು ವಿಷಯ ತಿಳಿಸಿದ್ದು, ಅವರು ಊರ ವರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂ ಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ದನ ಕಳವು ನಡೆದಿದ್ದು, ವ್ಯಾಪಕವಾಗುವ ಈ ದಂಧೆಗೆ ಕಡಿವಾಣ ಹಾಕಬೇಕೆಂದು ಸಿಪಿಎಂ ಮೀಂಜ ಲೋಕಲ್ ಸಮಿತಿ ಆಗ್ರಹಿ ಸಿದ್ದು, ಘಟನೆಯನ್ನು ಖಂಡಿಸಿದೆ.

NO COMMENTS

LEAVE A REPLY