ಕೇಸುಗಳನ್ನು ವಿಭಜಿಸಿ ನೀಡುವ ಅಧಿಕಾರ ಮುಖ್ಯ ನ್ಯಾಯಾಧೀಶರಿಗೆ ಮಾತ್ರ-ಸು.ಕೋರ್ಟ್

0
12

ಹೊಸದಿಲ್ಲಿ: ಸುಪ್ರೀಂಕೋ ರ್ಟ್‌ನ ಪರಿಗಣನೆಗೆ ಬರುವ ಕೇಸುಗಳನ್ನು ಇತರ ನ್ಯಾಯಾಧೀ ಶರುಗಳಿಗೆ ವಿಭಜಿಸಿ ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀ ಶರು ಮಾತ್ರವೇ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್ ಇಂದು ಬೆಳಿಗ್ಗೆ ನೀಡಿದ ಮಹತ್ತರ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್‌ನ ಪರಿಗಣನೆಗೆ ಬರುವ ಪ್ರಕರಣಗಳ ವಿಚಾರಣೆಯನ್ನು ಯಾವ ಪೀಠ ಅಥವಾ ಯಾವ ನ್ಯಾಯಧೀಶರಿಗೆ ವಿಭಜಿಸಿ ನೀಡಬೇಕೆಂಬ ಅಧಿಕಾರ ಮುಖ್ಯ ನ್ಯಾಯಾಧೀಶರು ಮಾತ್ರವೇ ಹೊಂದಿದ್ದಾರೆ. ಈ ವಿಷಯದಲ್ಲಿ ಯಾವುದೇ ಶಂಕೆಯಾಗಲಿ, ವಿವಾದಗಳಾಗಲಿ ಬೇಡ. ಆ ಅಧಿಕಾರ ಮುಖ್ಯ ನ್ಯಾಯಾ ಧೀಶರಲ್ಲಿ ಮಾತ್ರವೇ ನಿಕ್ಷಿಪ್ತವಾಗಿದೆ. ಈ ವಿಷಯದಲ್ಲಿ ಅವರೇ ಪರಮಾಧಿಕಾರಿ ಎಂದು ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಪರಿU ಣನೆಗೆ ಬರುವ ಕೇಸುಗಳನ್ನು ಇತರ ನ್ಯಾಯಾಧೀಶರಿಗೆ ವಿಭಜಿಸಿ ನೀಡುವ ಅಧಿಕಾರವನ್ನು ಕೋ ಲೀಜಿಯಂಗೆ ವಹಿಸಿಕೊಡ ಬೇಕೆಂದು ಕೋರಿ ನ್ಯಾಯವಾದಿ ಶಾಂತಿಭೂಷಣ್ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲ ಯ ಕೊನೆಗೆ ಈ ಮೇಲಿನಂತೆ ತೀರ್ಪುನೀಡಿದೆ. ಮಾತ್ರವಲ್ಲದೆ ಆ ಅರ್ಜಿಯನ್ನು ವಜಾಗೈದಿದೆ.

NO COMMENTS

LEAVE A REPLY