ಅನಧಿಕೃತ ಹೊಯ್ಗೆ ಸಾಗಾಟ ಚಾಲಕನಿಗೆ ಜುಲ್ಮಾನೆ

0
12

ಕಾಸರಗೋಡು: ಟಿಪ್ಪರ್ ಲಾರಿಯಲ್ಲಿ ಅನಧಿಕೃತವಾಗಿ ಹೊಯ್ಗೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕನಿಗೆ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ) ೮೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪುಲ್ಲೂರು ಗುರುಪುರಂ ಪಾಡಿಯಿ ಲ್ ಹೌಸ್‌ನ ರಿಯಾಸ್ ಎ.ಪಿ.(೨೪) ಎಂಬಾತನಿಗೆ ಈ ಜುಲ್ಮಾನೆ ವಿಧಿಸಲಾಗಿ ದೆ. ೨೦೦೮ ಅಕ್ಟೋಬರ್ ೨೪ರಂದು ಪೊಯಿನಾಚಿ ಜಂಕ್ಷನ್‌ನಲ್ಲಿ ವಿದ್ಯಾನU ರ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಅನಧಿಕೃತ ವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆ ವಶಪಡಿಸಿ ಚಾಲಕ  ರಿಯಾ ಸ್‌ನ ವಿರುದ್ಧ ಪ್ರಕರಣ ದಾಖ ಲಿಸಿಕೊಂ ಡಿದ್ದರು. ಈ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಜುಲ್ಮಾನೆ ವಿಧಿಸಿದೆ.

NO COMMENTS

LEAVE A REPLY