ಬ್ಲೇಡ್ನಿಂದ ಗೀರಿ ವಿದ್ಯಾರ್ಥಿನಿಗೆ ಗಾಯ: ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಕೇಸು

0
19

ಕಾಸರಗೋಡು: ಸಹಪಾಠಿ ಗಳಾದ ಇಬ್ಬರು ವಿದ್ಯಾರ್ಥಿ ಗಳು ವಿದ್ಯಾರ್ಥಿನಿಯೋರ್ವಳ ದೇಹಕ್ಕೆ ಬ್ಲೇಡ್‌ನಿಂದ ಗೀರಿ ಗಾಯಗೊಳಿಸಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಶಾಲೆಯೊಂದರಲ್ಲಿ ನಡೆದಿದೆ. ಈ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಕಾಲಿಗೆ ಎಡವಿ ಅದೇ ಶಾಲೆಯ ವಿದ್ಯಾರ್ಥಿ ಗಳಿಬ್ಬರು ಮೊನ್ನೆ ಬಿದ್ದಿದ್ದರು. ಆ ದ್ವೇಷದಿಂದ  ಆ ಇಬ್ಬರು ವಿದ್ಯಾರ್ಥಿ ಗಳು ಸೇರಿ ಹೊಸ ಬ್ಲೇಡೊಂದನ್ನು ಖರೀದಿಸಿ  ಅದನ್ನು ಎರಡಾಗಿ ತುಂಡರಿಸಿ ವಿದ್ಯಾರ್ಥಿನಿಯ ದೇಹಕ್ಕೆ ಗೀರಿ ಗಾಯಗೊಳಿಸಿದ್ದಾರೆ. ಅದರಿಂದ ಆಕೆಯ  ಸಮವಸ್ತ್ರವೂ ಹರಿದು ಹೋಗಿದೆ. ಆಕೆಯನ್ನು ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಆಕೆಯ ಹೆತ್ತವರು ನೀಡಿದ ದೂರಿನ ಪ್ರಕಾರ ವಿದ್ಯಾನಗರ ಪೊಲೀಸರು  ಈ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY