ಜಾಮೀನು ವ್ಯವಸ್ಥೆಯಂತೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಹಾಯ ಒದಗಿಸುತ್ತಿದ್ದ ಆರೋಪಿ ವಾರಂಟ್ ಪ್ರಕಾರ ಮತ್ತೆ ಸೆರೆ

0
14

ಕಾಸರಗೋಡು: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ ಜಾಮೀನು ವ್ಯವಸ್ಥೆ ಪ್ರಕಾರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಹಾಯ ಒದಗಿಸುತ್ತಿದ್ದ ಆರೋಪಿಯನ್ನು ಬೇರೊಂದು ಪ್ರಕರಣದ ವಾರಂಟ್‌ನನ್ವಯ ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.

ಎಡನೀರು ಕೆಮ್ಮಂಗಯದ ಶಿವಪ್ರಸಾದ್(೨೯) ಬಂಧಿತನಾದ ಆರೋಪಿಯಾಗಿದ್ದಾನೆ. ಕಳೆದ ಜೂನ್ ೧೩ರಂದು ಎಡನೀರಿನ ಹೋಟೆಲ್‌ವೊಂದಕ್ಕೆ ನುಗ್ಗಿ ತಿಂಡಿ ನೀಡಿಲ್ಲ ಎಂಬ ದ್ವೇಷದಿಂದ ಹೋಟೆಲ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ  ನಡೆಸಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಇತರ ಸಾಮಗ್ರಿಗಳನ್ನು ಹಾನಿಗೊಳಿಸಿ ೯೦೦೦ ರೂ.ನಷ್ಟ ಉಂಟಾಗಿದ್ದು ಅದನ್ನು ತಡೆಯಲು ಬಂದ ಪತಿ ಮೇಲೂ ಹಲ್ಲೆ ನಡೆಸಿದ ದೂರಿನಂತೆ ಶಿವಪ್ರಸಾದ್ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಸಿಜೆಎಂ ನ್ಯಾಯಾಲಯ ಆತನಿಗೆ ನಿಬಂಧನೆಗಳಡಿ ಜಾಮೀನು ಮಂಜೂರು ಮಾಡಿತ್ತು. ಪ್ರತಿದಿನ ಕಾಸರಗೋಡು ಜನರಲ್ ಆಸ್ಪತ್ರೆಗೆ ತೆರಳಿ ಅಲ್ಲಿನ ಸೂಪರಿಂಟೆಂಡೆಂಟ್‌ರ ಮೇಲ್ನೋಟದಲ್ಲಿ  ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಮತ್ತು ಅವರ ಸಹಾಯಕರಿಗೆ ಒಂದು ಗಂಟೆ ಅಗತ್ಯದ ಸಹಾಯ ಒದಗಿಸಬೇಕಾಗಿದೆ. ಆ ಕುರಿತಾದ ವರದಿಯನ್ನು ಸುಪರಿಂಟೆಂಡೆಂಟ್ ಪ್ರತೀ ತಿಂಗಳು ಸಲ್ಲಿಸಬೇಕೆಂದು ಜಾಮೀನು ನಿಬಂಧನೆಯಲ್ಲಿ ತಿಳಿಸಲಾಗಿತ್ತು.

 

NO COMMENTS

LEAVE A REPLY