ಐ.ಎಸ್. ನಂಟು: ಸೂತ್ರಧಾರ ರಾಶೀದ್ನ ಆಸ್ತಿಪಾಸ್ತಿ ಮುಟ್ಟುಗೋಲಿಗೆ ನೋಟೀಸು ಜ್ಯಾರಿ

0
22

ಕಾಸರಗೋಡು: ಊರು ಬಿಟ್ಟು ವಿದೇಶಕ್ಕೆ ಹೋಗಿ ಅಲ್ಲಿಂದ ನಿಗೂಢವಾದ ರೀತಿಯಲ್ಲಿ ನಾಪತ್ತೆ ಯಾದ ಬಳಿಕ ವಿದೇಶದಲ್ಲಿರುವ ಜಾಗತಿಕ ಭಯೋತ್ಪಾದಕ ಸಂಘಟನೆ ಯಾದ ಇಸ್ಲಾಮಿಕ್ ಸ್ಟೇಟ್(ಐ.ಎಸ್)ಗೆ ಸೇರಿರುವುದಾಗಿ ಶಂಕಿಸಲಾಗುತ್ತಿರುವ ತೃಕರಿಪುರ ನಿವಾಸಿ ಅಬ್ದುಲ್ಲಾ ರಶೀದ್ (೪೦)ನ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಎರ್ನಾಕುಳಂ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಕ್ರಮ ಆರಂಭಿಸಿದೆ. ಇದರಂತೆ ಅಬ್ದುಲ್ ರಾಶೀದ್‌ನ ಮನೆ ಮತ್ತಿತರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲುಗೊ ಳಪಡಿಸುವಂತೆ ಎನ್.ಐ.ಎ ವಿಶೇಷ ನ್ಯಾಯಾಲಯ ಆದೇಶಿಸಿ ನೋಟೀಸು ಜ್ಯಾರಿಗೊಳಿಸಿದ್ದು, ಅದನ್ನು ಅಬ್ದುಲ್ ರಾಶೀದ್‌ನ ತೃಕರಿಪುರ ಗ್ರಾಮದ ಉಡುಂಬುತಲದಲ್ಲಿರುವ ಆತನ ಮನೆ ಮತ್ತು ಇಳಂಬಿಚ್ಚಿಯ ತೆಕ್ಕೇತೃಕರಿಪುರ ಗ್ರಾಮ ಕಚೇರಿಯಲ್ಲೂ ಎನ್.ಐ.ಎ ವಿಶೇಷ ನ್ಯಾಯಾಲಯ ಜ್ಯಾರಿಗೊಳಿಸಿದ ಆದೇಶದ ನೋಟೀಸು ಲಗತ್ತಿಸಲಾಗಿದೆ. ಅಬ್ದುಲ್ ರಾಶೀದ್‌ನ ಆಸ್ತಿಪಾಸ್ತಿಗಳ ಕುರಿತಾದ ಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ಆ ಕುರಿತಾದ ಸಮಗ್ರ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಗ್ರಾಮ ಕಚೇರಿಗೆ ನಿರ್ದೇಶ ನೀಡಿದೆ. ಮಾತ್ರವಲ್ಲ, ಅಬ್ದುಲ್ ರಾಶೀದ್ ನನ್ನು ಪತ್ತೆಹಚ್ಚಿ ಅಗೋಸ್ತು ೧೩ರಂದು ಹಾಜರುಪಡಿಸುವಂತೆಯೂ ಎನ್.ಐ.ಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

೨೦೧೬  ಮೇ ೨೫ರಿಂದ ೨೦೧೬ ಜೂನ್ ೨೦ರ ಅವಧಿಯಲ್ಲಿ ಕಾಸರ ಗೋಡು  ಜಿಲ್ಲೆಯ ಪಡನ್ನ, ತೃಕರಿಪುರ ಎಂಬೆಡೆಗಳಿಂದಾಗಿ ವ್ಯಾಪಾರ ಅಗತ್ಯಗಳಿ ಗಾಗಿ ಶ್ರೀಲಂಕಾಕ್ಕೆ ಹೋಗುವುದಾಗಿ ತಿಳಿಸಿ ಹದಿನೇಳು ಮಂದಿ ಊರು ಬಿಟ್ಟಿದ್ದರು. ಹೀಗೆ ಊರು ಬಿಟ್ಟವರು ಅಫಘಾನಿಸ್ತಾನ ಮತ್ತು ಸಿರಿಯಾದಲ್ಲಿ ರುವ ಐ.ಎಸ್. ಶಿಬಿರಕ್ಕೆ ಸೇರಿರುವುದಾಗಿ ಈ ಪ್ರಕರಣ ತನಿಖೆ ನಡೆಸುತ್ತಿರುವ ಎನ್.ಐ.ಎ ಆರಂಭದಲ್ಲೇ ಶಂಕೆ ವ್ಯಕ್ತಪಡಿಸಿತ್ತು. ಹೀಗೆ ವಿದೇಶಕ್ಕೆ ಹೋದವರ ಪೈಕಿ   ಹಲವರು ಅಮೆರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವಿಗೀಡಾ ಗಿದ್ದಾರೆಂಬ ಮಾಹಿತಿಯೂ ನಾಪತ್ತೆ ಯಾದ ಕೆಲವರ ಮನೆಯವ ರಿಗೂ ಲಭಿಸಿತ್ತು. ಆದರೆ ಅದನ್ನು ಎನ್.ಐ.ಎ ಈತನಕ ಖಾತರಿಪಡಿಸಿ ಲ್ಲ. ಕಾಸರಗೋಡು ಮತ್ತು ಪಾಲ್ಘಾಟ್ ಜಿಲ್ಲೆಗಳಿಂದಾಗಿ ಎರಡು ಹಂತಗಳಲ್ಲಾಗಿ ಊರು ಬಿಟ್ಟು ಐ.ಎಸ್‌ಗೆ ಸೇರ್ಪಡೆ ಗೊಂಡ ಬಗ್ಗೆ ಎನ್.ಐ.ಎ ಒಟ್ಟು ೨೧ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

NO COMMENTS

LEAVE A REPLY