ಟೂರಿಸ್ಟ್ ಹೋಮ್ನಿಂದ ಕಳವು ಆರೋಪಿಗೆ ಎರಡು ವರ್ಷ ಸಜೆ

0
13

ಕಾಸರಗೋಡು: ಟೂರಿಸ್ಟ್ ಹೋಮ್‌ನಿಂದ ನಗದು ಒಳಗೊಂಡ ಪರ್ಸನ್ನು ಕಳವುಗೈದ ಪ್ರಕರಣದ ಆರೋಪಿಗೆ ಕಾಸರ ಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್  ನ್ಯಾಯಾಲಯ ಎರಡು ಸೆಕ್ಷನ್‌ಗಳ ಲ್ಲಾಗಿ ತಲಾ ಒಂದು ವರ್ಷ ಸಜೆ ಎಂಬಂತೆ ಒಟ್ಟು ಎರಡು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ನೀರ್ಚಾಲು ಬೇಳ ಹೌಸ್‌ನ  ಅಬ್ದುಲ್ ಸಹೀರ್(೨೦) ಎಂಬಾತ ನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾ ಗಿದೆ. ೨೦೧೭ ಅಕ್ಟೋಬರ್ ೧೪ರಂದು ಕಾಸರಗೋಡು ಅಶ್ವಿನಿ ನಗರದಲ್ಲಿರು ವ ಮಳಿ ಟೂರಿಸ್ಟ್ ಹೋಮ್‌ನ ಕ್ಯಾಶ್ ಕೌಂಟರಿಗೆ ನುಗ್ಗಿ  ಮೇಜಿನೊ ಳಗಿರಿಸಿದ್ದ ೪೦,೦೦೦ರೂ. ನಗದು, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ಒಳಗೊಂಡ ಪರ್ಸನ್ನು ಕಳವುಗೈದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಆ ಬಗ್ಗೆ ಪ್ರಸ್ತುತ ಟೂರಿಸ್ಟ್ ಹೋಮ್‌ನ ಮೆನೇಜರ್ ಸುಲೈಮಾನ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಅಬ್ದುಲ್ ಸಹೀರ್‌ಗೆ ಸಜೆ ವಿಧಿಸಲಾಗಿದೆ.

NO COMMENTS

LEAVE A REPLY