ವಿದ್ಯಾರ್ಥಿನಿಯರ ಮುಂದೆ ನಗ್ನತೆ ಪ್ರದರ್ಶನ: ಇನ್ನೋರ್ವ ಸೆರೆ

0
30

ಹೊಸದುರ್ಗ: ವಿದ್ಯಾರ್ಥಿನಿಯರ ಮುಂದೆ ನಗ್ನತೆ ಪ್ರದರ್ಶಿಸಿದ ಇನ್ನೋರ್ವನನ್ನು ನಾಗರಿಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿನ್ನೆ ಸಂಜೆ ಕಾಞಂಗಾಡ್‌ನಲ್ಲಿ ಘಟನೆ ನಡೆದಿದೆ. ಹೊಸದುರ್ಗ ಕಾಞಿರ ಪೊಯಿಲ್ ನಿವಾಸಿ ಅಶೋಕನ್(೨೭) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.

ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮುಂದೆ ಈತ ನಗ್ನತೆ ಪ್ರದರ್ಶಿಸಿದ್ದಾನೆಂದು ದೂರಲಾಗಿದೆ.  ಇದನ್ನರಿತ ಸ್ಥಳೀಯರು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಞಂಗಾಡ್‌ನಲ್ಲಿ ಯುವತಿಯರ ಮುಂದೆ ನಗ್ನತೆ ಪ್ರದರ್ಶಿಸುವ ಉಪಟಳ ಮಿತಿಮೀರಿದ್ದು, ಈ ಹಿಂದೆ ಎರಡು ಪ್ರಕರಣ ದಾಖಲಿಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ  ರೈಲು ನಿಲ್ದಾಣ ರಸ್ತೆಯಲ್ಲಿ ಕಾನೂನು ವಿದ್ಯಾರ್ಥಿನಿಯ ಮುಂದೆ ವ್ಯಕ್ತಿಯೋರ್ವ ನಗ್ನತೆ ಪ್ರದರ್ಶಿಸಿದ್ದನು. ಈ ಬಗ್ಗೆ ಯುವತಿ ದೂರು ನೀಡಿದ್ದು ಆದರೆ ಇದುವರೆಗೆ ಆ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಅನಂತರ  ಮೂವರು ವಿದ್ಯಾರ್ಥಿನಿಯರು ಟ್ಯೂಶನ್ ಕಳೆದು ಮರಳುತ್ತಿದ್ದಾಗ ವ್ಯಕ್ತಿಯೋರ್ವ ನಗ್ನತೆ ಪ್ರದರ್ಶಿಸಿದ್ದನು. ಬಳಿಕ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ನಡೆದ ಆತನನ್ನು ಬಸ್ ನಿಲ್ದಾಣ ಬಳಿ ನಾಗರಿಕರು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

NO COMMENTS

LEAVE A REPLY