ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವೃದ್ಧ ಮೃತ್ಯು

0
16

ಮಂಜೇಶ್ವರ: ತ್ರಿಪೇಸ್ ತಂತಿ ತುಂಡಾಗಿ ಬಿದ್ದು ಅದರಿಂದ ಶಾಕ್ ತಗಲಿ ವೃದ್ಧರೋರ್ವರು ದಾರುಣ ವಾಗಿ ಮೃತಪಟ್ಟಿದ್ದಾರೆ. ವರ್ಕಾಡಿ ಪಂಚಾಯ ತ್‌ನ ಕೊಡ್ಲಮೊಗರು ಮಡ್ವ ಎಂಬಲ್ಲಿನ ನಿವಾಸಿ ಯು. ಗಣಪತಿ ಭಟ್(೭೪) ಮೃತಪಟ್ಟವರು. ನಿನ್ನೆ ಸಂಜೆ  ಪೂe ಗೆಂದು ಮನೆ ಹಿತ್ತಿಲಿನಿಂದ ಹೂವು ಸಂಗ್ರಹಿಸುತ್ತಿದ್ದ ಮಧ್ಯೆ ಕಡಿದು ಬಿದ್ದ ತಂತಿಯಿಂದ ಶಾಕ್ ತಗಲಿದೆ. ಕೂಡಲೇ ದೂರಕ್ಕೆಸೆಯಲ್ಪಟ್ಟ ಗಣಪತಿ ಭಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆಸ್ಪ ತ್ರೆಗೆ ಕೊಂಡು ಹೋಗಲಾಗಿದ್ದು, ಅಗತ್ಯ ಕ್ರಮಗಳನ್ನು ಮುಗಿಸಿ ಇಂದು ಬೆಳಿಗ್ಗೆ ಮೃತದೇಹದ ಅಂತ್ಯಕ್ರಿಯೆ ನಡೆಯಿತು.

ವರ್ಕಾಡಿ ಪಂಚಾಯತ್‌ನ ಕೆಎಸ್‌ಇಬಿ ವ್ಯಾಪ್ತಿಯಲ್ಲಿ ಶಾಕ್ ತಗಲಿ ಮೃತಪಡುವ ಘಟನೆಗಳು ಮರುಕಳಿ ಸುತ್ತಿವೆ. ಕಳೆದ ಹಲವಾರು ವರ್ಷದ ಹಿಂದೆ ವೇದೋಡಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಆರು ಮಂದಿ ಮೃತಪಟ್ಟಿದ್ದು ಆ ಬಳಿಕ ಸುಳ್ಯಮೆ ಎಂಬಲ್ಲಿ ಕಾರ್ಮಿಕನೋರ್ವ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಮೃತಪಟ್ಟಿದ್ದಾರೆ.

ನಿನ್ನೆ ಮೃತಪಟ್ಟ ಯು. ಗಣಪತಿ ಭಟ್ ಪತ್ನಿ ಶಾರದಮ್ಮ, ಮಕ್ಕಳಾದ ಜ್ಯೋತಿ ಕುಮಾರಿ, ಪ್ರೀತಿ, ಅಳಿಯ ಂದಿರಾದ ಸತ್ಯಶಂಕರ ಕಲ್ಚಾರ್, ಸುಬ್ರಹ್ಮಣ್ಯ ಭಟ್ ಗುರುವಾಯನಕೆರೆ, ಸಹೋದರರಾದ  ಡಾ. ಶ್ಯಾಮ ಭಟ್ ಯು.ಕೆ.(ನಿವೃತ್ತ ಪ್ರೊಫೆಸರ್ ಉಡುಪಿ), ಬಾಲಚಂದ್ರ ಭಟ್ ಸಿ., ಶಿವರಾಮ ಭಟ್ ಪಿ., ಶಂಕರ ನಾರಾಯಣ ಭಟ್, ಸಹೋದರಿ ವಿಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

 

NO COMMENTS

LEAVE A REPLY