ಯುವಕನಿಗೆ ಹಲ್ಲೆ :ಆರೋಪಿಗಳಿಗೆ ಸಜೆ, ಜುಲ್ಮಾನೆ

0
11

ಕಾಸರಗೋಡು: ವಿದ್ಯಾನಗರದ ಪೆಟ್ರೋಲ್ ಬಂಕ್ ಬಳಿ ೨೦೦೯ ಜನವರಿ ೩ರಂದು ನಾಯಮ್ಮಾರ ಮೂಲೆಯ ಅಬ್ದುಲ್ ನಾಜರ್ ಎಂಬವರಿಗೆ ಪೂರ್ವದ್ವೇಷ ನಿಮಿತ್ತ ಹಲ್ಲೆ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು  ಸಿಜೆಎಂ ನ್ಯಾಯಾಲಯ ಒಂದು ಸೆಕ್ಷನ್‌ನಲ್ಲಿ ೧ ತಿಂಗಳು, ಇನ್ನೊಂದು ಸೆಕ್ಷನ್‌ನಲ್ಲಿ ೩ ತಿಂಗಳು, ಮತ್ತೊಂದು ಸೆಕ್ಷನ್‌ನಲ್ಲಿ ಒಂದು ವರ್ಷ ಕಠಿಣ ಸಜೆ ಮತ್ತು ೫೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಮುಟ್ಟತ್ತೋಡಿ ತಾಯಲ್ ನಾಯಮ್ಮಾರಮೂಲೆಯ ಶಬೀರ್ ಎನ್.ಎಸ್ (೨೪) ಮತ್ತು ಮುಳಿಯಾರು ಬಾವಿಕ್ಕೆರೆ ರೋನ್‌ಕನಾ ಮಂಜಿಲ್‌ನ ಬಿ.ಎಂ. ರಾಶೀದ್ (೧೯) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ, ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಈಬಗ್ಗೆ ಕಾಸರಗೋಡು ಪೊಲೀಸರು ದಾಖ ಲಿಸಿಕೊಂಡ ಪ್ರಕರಣ ಇದಾಗಿದೆ.

NO COMMENTS

LEAVE A REPLY