ಮದುವೆ ಸಮಾರಂಭಕ್ಕೆ ಬಂದ ವಾಹನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಅಡಚಣೆ: ಮುಸ್ಲಿಂಲೀಗ್ ನೇತಾರನ ವಿರುದ್ಧ ಕೇಸು

0
18

ಕಾಸರಗೋಡು: ನಾಯಮ್ಮೂರ ಮೂಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದ ವಾಹನಗಳನ್ನು ರಸ್ತೆ ಬಳಿ ಇತರ ವಾಹನಗಳು ಹಾದು ಹೋ ಗಲು ಸಾಧ್ಯವಾಗದ ರೀತಿಯಲ್ಲಿ ನಿಲುಗಡೆಗೊಳಿಸಿ ಆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡು ತಾಸು ಗಳ ತನಕ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಬಗ್ಗೆ ವಿದ್ಯಾನಗರ ಪೊಲೀಸರು ಸ್ವಯಂ ಆಗಿ ಪ್ರಕರಣ ದಾಖ ಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಸ್ಲಿಂಲೀಗ್ ನೇತಾರ, ಎಸ್‌ಟಿಯು ಜಿಲ್ಲಾ ಅಧ್ಯಕ್ಷ ಹಾಗೂ ಚೆಂಗಳ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ ನಾಯಮ್ಮಾರಮೂಲೆಯ ಎ. ಅಹಮ್ಮದ್ ಹಾಜಿಯವರ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. 

ಅಹಮ್ಮದ್ ಹಾಜಿಯವರ ಪುತ್ರನ ವಿವಾಹ ನಾಯಮ್ಮಾರ ಮೂಲೆಯಲ್ಲಿರುವ ಅವರ ಮನೆಯಲ್ಲಿ ಶನಿವಾರದಂದು ನಡೆದಿತ್ತು. ಅಂದು ಸಂಜೆ ಆಲಂಪಾಡಿಯ ಲ್ಲಿರುವ ವಧುಗೃಹದಿಂದ ಹಲವಾರು ವಾಹನಗಳಲ್ಲಾಗಿ ವರನ ಮನೆಯಾದ ನಾಯಮ್ಮಾರಮೂಲೆಗೆ ಬಂದು ವಾಹನ ಗಳನ್ನು  ರಾಷ್ಟ್ರೀಯ ಹೆದ್ದಾರಿಯಲ್ಲೇ ಅವೈ ಜ್ಞಾನಿಕವಾಗ ರೀತಿಯಲ್ಲಿ ನಿಲುಗಡೆಗೊಳಿಸಿ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸ ಲಾಗಿತ್ತು. ಅದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸುಗಳ, ಮತ್ತಿತರ ವಾಹಗಳು ಅತ್ತಿತ್ತ ಸಾಗಲು ಸಾಧ್ಯವಾಗದೆ ಗಂಟೆಗಟ್ಟಲೆ ತನಕ ರಸ್ತೆಯಲ್ಲೇ ಉಳಿದು ಕೊಳ್ಳಬೇಕಾಗಿ ಬಂತು. ಅದರಿಂದಾಗಿ ಆ ವಾಹನಗಳಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಗಂಟೆಗಟ್ಟಲೆ ತನಕ ವಾಹನದೊಳಗೇ ಇದ್ದು ತೀವ್ರ ಸಂಕಷ್ಟ ಅನುಭವಿ ಸಬೇಕಾಗಿ ಬಂತು. ಹಲವು ಬಸ್ಸುಗಳ ಸೇವೆಯನ್ನು ಮೊಟಕುಗೊಳಿಸಬೇಕಾಗಿ ಬಂತು. ಇದು ಜನರ ಭಾರೀ ಆಕ್ರೋಶಕ್ಕೂ ದಾರಿ ಮಾಡಿಕೊಟ್ಟಿತ್ತು.  ಈ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY