ಬೆಂಕಿ ತಗಲಿ ಗಾಯಗೊಂಡಿದ್ದ ಯುವಕ ಮೃತ್ಯು

0
15

ಮಲ್ಲ: ಬೆಂಕಿ ತಗಲಿ ಸುಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆಯ ಲ್ಲಿದ್ದ ಯುವಕ ಮೃತಪಟ್ಟರು. ಮಲ್ಲ ಬಳಿಯ ಮಜೆಕ್ಕಾರ್ ನಿವಾಸಿ ವಿಶ್ವನಾಥ (೩೪) ಮೃತಪಟ್ಟವರು. ಕಳೆದ ಒಂದು ತಿಂಗಳ ಹಿಂದೆ ಅಡುಗೆ ಮನೆಯಲ್ಲಿ ಒಲೆಗೆ ಬಿದ್ದ ಇವರನ್ನು ಗಂಭೀರ ಗಾಯಗಳೊಂದಿಗೆ ಮಂಗ ಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತದೇಹ ವನ್ನು ನಿನ್ನೆ ಸಂಜೆ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ಅವಿವಾಹಿತರಾದ ಮೃತರು ತಂದೆ ಗುರುವ, ತಾಯಿ ಕಮಲಾ, ಸಹೋದರ ನಾರಾಯಣ, ಸಹೋ ದರಿಯರಾದ ಬೇಬಿ, ಪುಷ್ಪಾ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY